ಶಿರಸಿ : ಕೊರೊನಾ ಲಸಿಕೆ ನೀಡಿ ಕೋವಿಡ್ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವ ತಾಲೂಕಾಡಳಿತ, ವಯೋವೃದ್ಧರ ಮನೆಗೆ ತೆರಳಿಯೇ ಲಸಿಕೆ ನೀಡಬೇಕೆನ್ನುವ ನಿಯಮವಿಲ್ಲದಿದ್ದರೂ ಮಾನವಿಯತೆ ದೃಷ್ಟಿಯಿಂದ ಶಿರಸಿ ಉಪವಿಭಾಗಧಿಕಾರಿ ಆಕೃತಿ ಬನ್ಸಾಲ್ ಸೂಚನೆಯ ಮೇರೆಗೆ ತಹಶೀಲ್ದಾರ್ ಎಂ. ಆರ್. ಕುಲಕರ್ಣಿ ಅವರು ತಮ್ಮ ಗಮನಕ್ಕೆ ಬಂದ 15ಕ್ಕೂ ಹೆಚ್ಚು ವೃದ್ಧರ ಮನೆಗೆ ಸಿಬ್ಬಂದಿಗಳೊAದಿಗೆ ತೆರಳಿ ಕೊರೊನಾ ಲಸಿಕೆ ನೀಡಿದರು.
ಅಶಕ್ತತೆಯಿಂದ ಮನೆಯಿಂದ ಹೊರ ಬರಲಾಗದ ಪರಿಸ್ಥಿತಿಯಲ್ಲಿರುವ 15ಕ್ಕೂ ಹೆಚ್ಚು ವೃದ್ಧರಿಗೆ ಇಂದು ಮನೆಗೆ ತೆರಳಿ ಕೊರೊನಾ ಲಸಿಕೆ ನೀಡಲಾಯಿತು.ಮಾನವಿಯತೆ ದೃಷ್ಟಿಯಿಂದ ಮಾತ್ರ ಅಸಾಹಯಕರ ಮನೆಗೆ ತೆರಳಿ ಲಸಿಕೆ ನೀಡುತ್ತಿದ್ದೇವೆ. ಇವರ ಹೊರತಾಗಿ ಎಲ್ಲರೂ ಲಸಿಕಾ ಕೇಂದ್ರಗಳಿಗೆ ಹೋಗಿಯೇ ಲಸಿಕೆ ಪಡೆಯಬೇಕೆಂದು ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ತಿಳಿಸಿದ್ದಾರೆ.