• Slide
    Slide
    Slide
    previous arrow
    next arrow
  • ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆ ಸೇರಿಸಿ ಮಾನವೀಯತೆ ಮೆರೆದ ಸದಸ್ಯರು

    300x250 AD

    ಕುಮಟಾ: ಮೂರೂರು ವಲಯದ ದಿವಗಿ ಗ್ರಾಮದ ಸ್ವ-ಸಹಾಯ ಸಂಘದ ಸದಸ್ಯೆ ಸಾವಿತ್ರಿ ಅಂಬಿಗ ಎಂಬಾಕೆ ಅನಾರೋಗ್ಯದಿಂದ ಬಳಲುತ್ತಿರುವದನ್ನು ಗಮನಿಸಿದ ಸ್ಥಳೀಯರು ಹಾಗೂ ವಿವಿಧ ಸಂಘಟನೆಯ ಸದಸ್ಯರುಗಳು ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.

    ಈಕೆಯ ಗಂಭೀರ ಅನಾರೋಗ್ಯ ಸ್ಥಿತಿಯನ್ನು ಕಂಡ ಸ್ಥಳೀಯರು ಇಲ್ಲಿನ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಪುರುಷ ಸ್ವ ಸಹಾಯ ಸಂಘದ ಸದಸ್ಯರುಗಳ ಹಾಗೂ ಬಿಜೆಪಿ ತಾಲೂಕು ಆಧ್ಯಕ್ಷರಾದ ಹೇಮಂತ್ ಕುಮಾರ ಗಾಂವಕರ್ ರವರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದ ಹೇಂಮತ ಗಾಂವಕರ ಕೂಡಲೇ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದ್ದಾರೆ. ನಂತರ ದಿವಗಿಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ನಾಗರಾಜ ಅಂಬಿಗ, ಪ್ರವೀಣ ಅಂಬಿಗ, ನವೀನ್ ಅಂಬಿಗ ಇವರು ಮತ್ತು ಸೇವಾ ಪ್ರತಿನಿಧಿಗಳಾದ ಮಂಗಲ, ಸುನಿತಾ ಸೇರಿ ಅನಾರೋಗ್ಯ ಪೀಡಿತ ಸಾವಿತ್ರಿಯವರನ್ನು ಮನೆಯಿಂದ ಕರೆತಂದು ಆಂಬ್ಯುಲೆನ್ಸ್ ನಲ್ಲಿ ಕೂಳ್ಳಿರಿಸಿ ಕಾರವಾರದ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

    300x250 AD

    ಇದಲ್ಲದೆ ಸಾವಿತ್ರಿ ಯವರಿಗೆ ದಿವಗಿ ಶೌರ್ಯಾ ವಿಪತ್ತು ಘಟಕದ ಸದಸ್ಯರುಗಳು, ದಿವಗಿ ಮತ್ತು ಅಂತ್ರವಳ್ಳಿ ಸೇವಾ ಪ್ರತಿನಿಧಿಗಳು, ದಿವಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗವೇಣಿ ಅಂಬಿಗ, ದಿವಗಿ ಗ್ರಾಮ ಪಂಚಾಯತ್ ಸದಸ್ಯರಾದ ಮಂಗಲಾ ಭಟ್ಟ ಮತ್ತು ಸಮಾಜ ಬಾಂಧವರು ಈ ವೇಳೆ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top