ಯಲ್ಲಾಪುರ: ಪಟ್ಟಣದ ಅಸೂರ್ ಕರ್ ಸ್ವೀಟ್ ಅಂಗಡಿ ಪಕ್ಕದಲ್ಲಿದ್ದ ಗೋಬಿ ಮಂಚೂರಿ ಅಂಗಡಿಯೊಳಗೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಹೊಕ್ಕಿ, ಅಂಗಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಗಾಯಗೊಂಡ ಘಟನೆ ನಡೆದಿದೆ.
ಗೋಕರ್ಣದಿಂದ ಚಿರೆಕಲ್ಲು ತುಂಬಿಕೊಂಡು ಕಣ್ಣಿಗೇರೆಗೆ ಈ ಲಾರಿ ಹೋಗುವುದಾಗಿತ್ತು ಎನ್ನಲಾಗಿದ್ದು, ಲಾರಿಯಲ್ಲಿದ್ದ ಚಾಲಕ ರಾಜಾಸಾಬ್ ಮದನ್ ಸಾಬ್, ಹಮಾಲಿ ಕಲೆಸ ಮಾಡುವ ಈರಪ್ಪ ಮನೆಗಾರ್, ಬಸವರಾಜ್ ಶಿವಪ್ಪ ಕಜರಿ ಅವರ ಕೈ ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಇವರನ್ನು ತಕ್ಷಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ಆರಿಸಿದ್ದಾರೆ.