• Slide
    Slide
    Slide
    previous arrow
    next arrow
  • ಸರಕುಳಿಯಲ್ಲಿ ಬ್ಯಾಗ್ ವಿತರಣೆ, ಮಾಹಿತಿ ಕಾರ್ಯಾಗಾರ

    300x250 AD

    ಸಿದ್ದಾಪುರ: ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಗಡಿಯಲ್ಲಿ ಇರುವ ಸರಕುಳಿ ಶ್ರೀ ಜಗದಾಂಬಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ, ಸಿ.ಸಿ ಕ್ಯಾಮರಾ ಉದ್ಘಾಟನೆ, ಸಾರಿಗೆ ಅಧಿಕಾರಿಗಳಿಂದ ಸಂಚಾರ ಮಾರ್ಗದರ್ಶನ ಕಾರ್ಯಕ್ರಮಗಳು ನಡೆದವು.


    ನಿವೃತ್ತ ಮುಖ್ಯಾಧ್ಯಾಪಕ ಎಂ.ಎಂ.ಹೆಗಡೆ ಅವರು ಸಿಸಿಟಿವಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿರಸಿ ಆರ್‌ಟಿಓ ಸಿ.ಡಿ.ನಾಯ್ಕ ಮಕ್ಕಳಿಗೆ ಸಾರಿಗೆ, ಸಂಚಾರದ ಮಾಹಿತಿ ನೀಡಿದರು. ಸಂಚಾರದ ನಿಯಮಗಳ ಕುರಿತು ಕೇಳಲಾದ ಪ್ರಶ್ನೆಗೆ ಸರಿ ಉತ್ತರ ಕೊಟ್ಟ ಮಕ್ಕಳಿಗೆ ಬಹುಮಾನ ಕೂಡ ವಿತರಿಸಿದರು.


    ಎಂಟನೇ ವರ್ಗದ 35 ಮಕ್ಕಳಿಗೆ ಆರ್‌ಡಿಎಸ್ ಸ್ವಯಂ ಸೇವಾ ಸಂಸ್ಥೆ 1200 ರೂ. ಮೌಲ್ಯದ ಬ್ಯಾಗ್, 2 ಜೊತೆ ಸಮಸವಸ್ತ್ರ, ಎರಡು ಪಟ್ಟಿ ವಿತರಿಸಿ ಶುಭ ಕೋರಿದರು.

    300x250 AD


    ಇದೇ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದು ಸಾಧನೆ ಮಾಡಿದ 10 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
    ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಆರು ಮುಖ್ಯಾಧ್ಯಾಪಕರು ಪಾಲ್ಗೊಂಡಿದ್ದರು. ಬಿ.ಎಂ.ಚಿತ್ರಗಿ ಮಠ, ಜಿ.ಎಸ್.ಹೆಗಡೆ, ಜಿ.ಆರ್.ಭಾಗವತ, ಟಿ.ಆರ್.ಜೋಶಿ, ಎಸ್.ಎನ್.ಭಟ್ಟ, ಎಂ.ಎಂ.ಹೆಗಡೆ ಪಾಲ್ಗೊಂಡರು. ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಎಂ.ಜಿ.ಹೆಗಡೆ ವಹಿಸಿದ್ದರು.


    ಸ್ತುತಿ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕ ಕೃಷ್ಣಮೂರ್ತಿ ಹೆಗಡೆ ಸ್ವಾಗತಿಸಿದರು. ಎಂ.ವಿ.ನಾಯ್ಕ ವಂದಿಸಿದರು. ವಿ.ಎಸ್.ಭಟ್ಟ ನಿರ್ವಹಿಸಿದರು

    Share This
    300x250 AD
    300x250 AD
    300x250 AD
    Leaderboard Ad
    Back to top