ಭಟ್ಕಳ: ಇಲ್ಲಿನ ಸಿಇಎನ್ ಮತ್ತು ನಗರ ಠಾಣೆ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ತಾಲೂಕಿನ ರೈಲ್ವೇ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.
ಅಬ್ದುಲ್ ರಷೀದ್, ಮಹಮ್ಮದ್ ಇರ್ಷಾದ ಎಂಬವರು ಬಂಧಿತ ಆರೋಪಿಗಳು. ಇವರು ಮಂಗಳವಾರ ರಾತ್ರಿ ಭಟ್ಕಳ ರೈಲ್ವೇ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು 560 ಗ್ರಾಂ ತೂಕದ ಗಾಂಜಾವನ್ನು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಮಾದಕ ವಸ್ತುವಾದ ಗಾಂಜಾವನ್ನು ತಮ್ಮ ವಶದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಬಂಧಿಸಲಾಗಿದೆ. ಆರೋಪಿಗಳಿಂದ ಒಟ್ಟು 560 ಗ್ರಾಂ ಗಾಂಜಾ, ವಶಪಡಿಸಿಕೊಂದಿದ್ದಾರೆ. ಈ ಕುರಿತು ಭಟ್ಕಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.