ಮುಂಡಗೋಡ: ತಾಲೂಕಿನ ಮೈನಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿ ಕೊಠಡಿ ಹಾಗೂ ಶೌಚಾಲಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಸಚಿವ ಶಿವರಾಮ ಹೆಬ್ಬಾರ್ ನೆರವೇರಿಸಿದರು.
ಇಂಡೋ ಮಿಮ್ ಪ್ರೈವೇಟ್ ಲಿಮಿಟೆಡ್ ಕಂಪನಿ ಬೆಂಗಳೂರು ಅವರು ಸಚಿವ ಹೆಬ್ಬಾರ್ ಅವರ ಮನವಿಯ ಮೇರೆಗೆ ತಮ್ಮ ಸಿ.ಎಸ್.ಆರ್ ಅನುದಾನದ ಅಡಿಯಲ್ಲಿ 28.50 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಶಾಲಾ ತರಗತಿ ಕೊಠಡಿ ಹಾಗೂ ಶೌಚಾಲಯದ ಕಟ್ಟಡವನ್ನು ನಿರ್ಮಾಣ ಮಾಡಲಿದ್ದಾರೆ ಎಂದು ನೂತನವಾಗಿ ನಿರ್ಮಾಣ ಮಾಡಲಾಗಿರುವ ತರಗತಿ ಕೊಠಡಿಯನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಸಚಿವ ಹೆಬ್ಬಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ನಾಯಕ ವಿವೇಕ್ ಹೆಬ್ಬಾರ್, ಬಿಜೆಪಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್ ಹಾಗೂ ಪ್ರಮುಖರಾದ ದೇವು ಪಾಟೀಲ್, ಉಮೇಶ್ ಬಿಜಾಪುರ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರು ಊರಿನ ಗ್ರಾಮಸ್ಥರು, ಹಿರಿಯರು ಉಪಸ್ಥಿತರಿದ್ದರು