ಯಲ್ಲಾಪುರ: ತಾಲೂಕಿನ ಆರತಿಬೈಲ್ ಘಟ್ಟದ ಸಮೀಪದ ಕಣ್ಣಿಮನೆ ಕ್ರಾಸ್ ಬಳಿ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರನು ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಗೌಂಡಿ ಕೆಲಸ ಮಾಡುವ ಪಟ್ಟಣದ ವಲೀಶಾ ಗಲ್ಲಿಯ (44)ದುಂಡು ಗೋಂದಳಿ ಎಂದು ಗುರುತಿಸಲಾಗಿದೆ. ಬೈಕ್ ಹಿಂಬದಿ ಕುಳಿತಿದ್ದ ನೂತನ ನಗರದ ಗಣಪತಿ ಬಾಬು ಗೌಡ (58) ಗಾಯಗೊಂಡಿದ್ದಾನೆ. ಇವರು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ತೆರಳುತ್ತಿದ್ದರು. ಎದುರಿನಿಂದ ಅತಿ ವೇಗವಾಗಿ ಬಂದ ಲಾರಿಯು ಇವರ ಬೈಕಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಕುರಿತು ಪೆÇೀಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.