ಸಿದ್ದಾಪುರ : ಟಿ. ಎಂ. ಎಸ್. ಸಿದ್ದಾಪುರ ಇದರ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ಅವರ ನಿವಾಸಕ್ಕೆ ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭೇಟಿ ಕೊಟ್ಟ ಸಂದರ್ಭದಲ್ಲಿ ಟಿ. ಎಂ. ಎಸ್. ನ ಅಮೃತಮಹೋತ್ಸವ ಸಂಚಿಕೆಯನ್ನು ನೀಡಿ ಗೌರವಿಸಲಾಯಿತು.
ಅವರೊಂದಿಗೆ ಮುರಳೀಧರ ಪ್ರಭು, ಹೊಸಾಡು ಗೋ ಟ್ರಸ್ಟಿನ ಅಧ್ಯಕ್ಷರು ಹಾಗೂ ಬಾಲಸುಬ್ರಹ್ಮಣ್ಯ ಗೋಫಲ ಟ್ರಸ್ಟ್ ರಾಮಚಂದ್ರಾಪುರ ಮಠ ಇದರ ನಿರ್ದೇಶಕರು, ಉಷಾ ಭಟ್ ಗೋಫಲ ಟ್ರಸ್ಟ್ ರಾಮಚಂದ್ರಾಪುರ ಮಠ ಇದರ ನಿರ್ದೇಶಕರು, ಸುಶೀಲಾ ಆರ್. ಹೆಗಡೆ ಬಾಳೇಸರ, ರಾಜೀವ ಹೆಗಡೆ ಬಾಳೇಸರ ಮತ್ತು ಜಿ. ಜಿ. ಹೆಗಡೆ ಬಾಳಗೋಡ ಉಪಸ್ಥಿತರಿದ್ದರು.