ಶಿರಸಿ: ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಉದ್ದೇಶದಿಂದ ಇಂದು ಆಯೋಜಿಸಿದ್ದ ರಾಜೀವಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಮಾವೇಶವು ಹಳಿಯಾಳ ರಾಜಕಾರಣದ ಭಿನ್ನಭಿಪ್ರಾಯ ಹಂಚಿಕೆಗೆ ವೇದಿಕೆಯಾಯಿತು,
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೆಕರ ತನಗೆ ಪಂಚಾಯತ್ ರಾಜ್ ವ್ಯವಸ್ಥೆ ಕುರಿತು ಮಾಹಿತಿಯಿಲ್ಲ.ಆದರೆ ಹಳಿಯಾಳದಲ್ಲಿ ಬೇರೆ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡರೆ ಅದು ಅಸಿಂಧು ಆಗುತ್ತದೆ. ಹೀಗಾದರೆ ಸಂಘಟನೆ ಮಾಡುವುದು ಕಷ್ಟಸಾಧ್ಯ ಎಂದರು. ಇದಕ್ಕೆ ಹಿರಿಯ ಕಾಂಗ್ರೆಸ್ಸಿಗ ಆರ್.ವಿ. ದೇಶಪಾಂಡೆ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೆಲವೇ ಕ್ಷಣದಲ್ಲಿ ಇಡೀ ಸಭೆಯಲ್ಲಿ ಪರ- ವಿರೋಧಗಳ ಮಾತುಗಳು ವ್ಯಕ್ತವಾದವು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣನಾಯ್ಕ ಈ ಗೊಂದಲ ನಿವಾರಿಸಲು ಸ್ವತಃ ಸಭೆಯುದ್ದಕ್ಕೂ ಓಡಾಡಿದರು. ಈ ವೇಳೆ ಆರ್ವಿಡಿ ಪುತ್ರ ಪ್ರಶಾಂತ ದೇಶಪಾಂಡೆ ಇದ್ದರು.