ಕುಮಟಾ: ತಾಲೂಕಿನ ಖೈರೆ ಕ್ರಾಸ್ ಬಳಿ ಕುಮಟಾದಿಂದ ಕಾರವಾರದ ಕಡೆ ಹೋಗುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿಯಾದ ಘಟನೆ ನಡೆದಿದೆ.
ಅಂಬುಲೆನ್ಸ್ ವೀಲ್ ಜಾಂಮ್ ಆದ ಕಾರಣದಿಂದಾಗಿ ಅಂಬುಲೆನ್ಸ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಕಾರವಾರದ ಮದರ್ ತೆರೇಸಾ ಆಸ್ಪತ್ರೆಗೆ ಸಂಬಂಧಿಸಿದ ಆಂಬುಲೆನ್ಸ್ ಇದಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಆಂಬುಲೆನ್ಸ್ ನಲ್ಲಿ ಯಾವುದೇ ರೋಗಿಗಳು ಇಲ್ಲದ ಕಾರಣ ಯಾವುದೇ ದೊಡ್ಡಮಟ್ಟದ ಅನಾಹುತ ಸಂಭವಿಸಿಲ್ಲವಾಗಿದೆ. ಆದರೆ ಅಂಬುಲೆನ್ಸ್ ಪಲ್ಟಿಯಾಗಿದ್ದು ವಾಹನದ ಹೊರಮೈ ಝಕಂ ಆಗಿದೆ ಎನ್ನಲಾಗಿದೆ.