ಕುಮಟಾ : ಸಮುದ್ರಕ್ಕೆ ಈಜಲು ತೆರಳಿ ನೀರುಪಾಲಾಗುತ್ತಿದ್ದ ಹುಬ್ಬಳ್ಳಿ ಮೂಲದ ರೋಹಿತ್ ಪಾಟೀಲ್ ಸೇರಿ ಐದು ಜನರನ್ನು ರಕ್ಷಣೆ ಮಾಡಲಾಗಿದೆ. ಹುಬ್ಬಳ್ಳಿಯ ರೇಣುಕಾ ನಗರದಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಇಳಿದಿದ್ದ ರೋಹಿತ್ ಅಲೆಯ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿದ್ದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಮಂಜುನಾಥ ಉಪ್ಪಾರ, ಪ್ರವಾಸಿ ಮಿತ್ರ ಶೇಖರ್ ಹರಿಕಾಂತ, ಲೈಫ್ ಗಾರ್ಡ್ ರವಿ ಪೂಜಾರಿ ಸ್ಥಳೀಯರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.
ಈಜಲು ತೆರಳಿ ಸಮುದ್ರಪಾಲಾಗುತ್ತಿದ್ದ ಪ್ರವಾಸಿಗನ ರಕ್ಷಣೆ
