ದಾಂಡೇಲಿ : ವಿಸಿಲಿಂಗ್ ವುಡ್ಸ್ ರೆಸಾರ್ಟ್ ಕಚೇರಿ ಮುಂಭಾದಲ್ಲಿ ಇಂದು ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ಗಣೇಶ ಕೆ. ಎಲ್. ತಾಲೂಕು ಬೆಳೆಯಲು ಪ್ರವಾಸೋದ್ಯಮ ಬಹಳ ಅಗತ್ಯವಾಗಿದೆ. ಇಲ್ಲಿರುವ ಪರಿಸರ ಮತ್ತು ಪ್ರವಾಸಿ ತಾಣಗಳಿಂದ ತಾಲೂಕಿನ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಜೊಯಿಡಾ- ದಾಂಡೇಲಿ ತಾಲೂಕು ನಡೆಯುತ್ತಿರುವುದೇ ಪ್ರವಾಸೋದ್ಯಮದಿಂದ. ಇಲ್ಲಿರುವ ಕಾಡುಪ್ರಾಣಿ, ಪಕ್ಷಿ, ಇಲ್ಲಿನ ಪರಿಸರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹೊರಗಿನಿಂದ ಬರುವ ಪ್ರವಾಸಿಗರ ಮಾಹಿತಿಯನ್ನು ಇಲ್ಲಿನ ಸ್ಥಳೀಯ ಹೋಮ್ ಸ್ಟೇ ಮತ್ತು ರೆಸಾರ್ಟ್ ಮಾಲಿಕರು ಪಡೆದುಕೊಳ್ಳಬೇಕು. ಯಾವುದೇ ಗಲಾಟೆ- ಗದ್ದಲ ಆದಲ್ಲಿ ನಮ್ಮ ಪೊಲೀಸ್ ಇಲಾಖೆಗೆ ತಕ್ಷಣ ಮಾಹಿತಿ ನೀಡಿ ಎಂದರು. ಕಾನೂನು ಉಲ್ಲಂಘನೆ ಮಾಡದೇ ರ್ಯಾಫ್ಟಿಂಗ್ ಮತ್ತು ಹೋಮ್ ಸ್ಟೇ ನಡೆಸಿ. ರ್ಯಾಫ್ಟಿಂಗ್ ಮಾಡುವಾಗ ನಿರ್ದಿಷ್ಟ ಸಂಖ್ಯೆಯಲ್ಲಿ ಜನರನ್ನು ಮಾತ್ರ ಬೋಟಿಂಗ್‌ನಲ್ಲಿ ಹತ್ತಿಸಿ. ಯಾವುದೇ ಪ್ರವಾಸಿಗರಿಗೆ ತೊಂದರೆ ಆದರೆ ಅದಕ್ಕೆ ರ್ಯಾಫ್ಟಿಂಗ್ ನಡೆಸುವ ಮಾಲಿಕರೇ ಜವಾಬ್ದಾರರಾಗಿರುತ್ತಾರೆ. ಆದ್ದರಿಂದ ನಿಯಮದಂತೆ ರ್ಯಾಫ್ಟಿಂಗ್ ನಡೆಸಿ, ತಾಲೂಕಿನ ಪ್ರವಾಸೋದ್ಯಮ ಬೆಳಸಿ ಎಂದರು.
ದಾAಡೇಲಿಯ ಹಿರಿಯ ಪತ್ರಕರ್ತ ಯು. ಎಸ್. ಪಾಟೀಲ್ ಮಾತನಾಡಿ, ಜೊಯಿಡಾ- ದಾಂಡೇಲಿ ಪ್ರವಾಸೋದ್ಯಮ ಬೆಳೆಯಲು ಇನ್ನೂ ಹೆಚ್ಚಿನ ಅವಕಾಶಗಳು ಬೇಕಿವೆ. ಜನಪ್ರತಿನಿಧಿಗಳು, ರಾಜಕಾರಣಿಗಳು ಈ ಬಗ್ಗೆ ಹೆಚ್ಚಿನ ಒತ್ತನ್ನು ನೀಡಿ ಇಲ್ಲಿಯ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಪ್ರವಾಸೋದ್ಯಮದ ಕಾರ್ಯಕ್ರಮಗಳು
ಇಲ್ಲಿ ಆಗಬೇಕಿದೆ ಎಂದರು.
ಹೋಮ್ ಸ್ಟೇ ಮಾಲಕರ ಸಂಘದ ಅಧ್ಯಕ್ಷ ವಿಷ್ಣುಮೂರ್ತಿರಾವ್ ಮತ್ತು ಕಾಳಿ ಬ್ರಿಗೇಡ್ ಅಧ್ಯಕ್ಷ ರವಿ ರೇಡ್ಕರ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೇದಿಕೆಯಲ್ಲಿ ಅವೇಡಾ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ ಗದ್ದಿ, ರ್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಜಿಗ್ನೇಶ್, ವಕೀಲ ಸುನೀಲ್ ದೇಸಾಯಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ದೇಸಾಯಿ ಇತರರು ಇದ್ದರು.
ಕಾನೂನು ಉಲ್ಲಂಘನೆ ಮಾಡದೇ ರ್ಯಾಫ್ಟಿಂಗ್ ಮತ್ತು ಹೋಮ್ ಸ್ಟೇ ನಡೆಸಲು ಸೂಚನೆ
