ಯಲ್ಲಾಪುರ: ಮುಂಡಗೋಡ ಆಸ್ಪತ್ರೆಗೆ ಇತ್ತೀಚೆಗೆ ಸಚಿವ ಶಿವರಾಮ ಹೆಬ್ಬಾರ ಎರಡು ಡಯಾಲಿಸಿಸ್ ಯಂತ್ರಗಳನ್ನು ಮಂಜೂರಿ ಮಾಡಿಸಿದ್ದರು. ಮುಂಡಗೋಡನಲ್ಲಿ 14 ಜನ ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದು ಹೊಸ ಘಟಕಗಳು ಇತ್ತೀಚೆಗಷ್ಟೇ ಕಾರ್ಯ ಆರಂಭಿಸಿದ್ದವು. ಆದರೆ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಯಾಲಿಸಿಸ್ ಘಟಕವನ್ನು ಜಿಲ್ಲಾ ಆರೋಗ್ಯ ಇಲಾಖೆ ಏಕಾಏಕಿ ಇಂದು ಅಂಕೋಲಾಕ್ಕೆ ಎತ್ತಂಗಡಿ ಮಾಡಿದೆ ಎಂದು ಹೇಳಲಾಗಿದೆ.
ಈ ವಿಷಯ ಸ್ಥಳೀಯ ಮುಖಂಡರ ಗಮನಕ್ಕೂ ಬಂದಿಲ್ಲ. ಅಂಕೋಲಾದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಹೆಚ್ಚುವರಿಯಾಗಿರುವ ಹಳೆಯ ಡಯಾಲಿಸಿಸ್ ಯಂತ್ರವನ್ನು ಅಲ್ಲಿಗೆ ಸಾಗಿಸುತ್ತಿದ್ದೇವೆ. 15 ದಿನದಲ್ಲಿ ಇದನ್ನು ಮತ್ತೆ ವಾಪಸ್ ಮುಂಡಗೋಡಕ್ಕೆ ತರಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.
ಆದರೆ ಈಗಿರುವ 2 ಘಟಕಗಳು ಮುಂಡಗೋಡಕ್ಕೆ ಸಾಕಾಗುತ್ತಿಲ್ಲ. ಇರುವ ಮತ್ತೊಂದನ್ನು ಇಷ್ಟು ತರಾತುರಿಯಿಂದ ಸಾಗಿಸಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಕೇಳಿ ಬಂದಿದೆ.