ಜೋಯಿಡಾ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಜೋಯಿಡಾ ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಜೋಯಿಡಾ ಕುಣಬಿ ಸಭಾ ಭವನದಲ್ಲಿ ಅ.4 ಸೋಮವಾರ ಮುಂಜಾನೆ 10:30 ಕ್ಕೆ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ವೋಚ್ಛ ನ್ಯಾಯಾಲಯ ನ್ಯೂ ದೆಹಲಿ ಆದೇಶದಂತೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯ ಅತಿಕ್ರಮಣದಾರರ ಅರ್ಜಿಗಳನ್ನು ವಿವಿಧ ಅರಣ್ಯ ಹಕ್ಕು ಸಮಿತಿಯಲ್ಲಿ ಅರ್ಜಿಗಳ ಪುನರ್ ಪರಿಶೀಲನೆ ಜರುಗುತ್ತಿರುವ ಹಿನ್ನೆಲೆಯಲ್ಲಿ ಮಂಜೂರಿಗೆ ಸಂಬಂಧಿಸಿ ಕಾನೂನಿನ ಮಾಹಿತಿ, ಅರಣ್ಯ ಅಧಿಕಾರಿಗಳಿಂದ ಅರಣ್ಯವಾಸಿಗಳ ಮೇಲಾಗುತ್ತಿರುವ ದೌರ್ಜನ್ಯ, ಕಿರುಕುಳದ ಕುರಿತು ಹೋರಾಟದ ರೂಪು ರೇಷೆ ನಿರ್ಧರಿಸಲು ಸಭೆ ಕರೆಯಲಾಗಿದ್ದು, ಆಸಕ್ತ ಅರಣ್ಯ ಅತಿಕ್ರಮಣದಾರರು ಸದ್ರಿ ಸಭೆಗೆ ಆಗಮಿಸಬೇಕಾಗಿ ಕೋರಿಕೆ.