ಸಿದ್ದಾಪುರ: ತಾಲೂಕಿನ ವಾಜಗೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಯ್ನೇರಮನೆ ಗ್ರಾಮದ ನಿವಾಸಿ ಚಂದ್ರಶೇಖರ್ ಸುಬ್ರಾಯ ಭಟ್ ಮನೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, 130 ಗ್ರಾಮ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ತನ್ನ ಜೇಬಿನಲ್ಲಿ ಹಾಗೂ ಮನೆಯ ಅಡುಗೆ ಕೋಣೆಯ ಕಟ್ಟೆಯ ಕೆಳಗಡೆ ಒಟ್ಟು 16 ಪ್ಯಾಕೆಟ್ ಗಳಲ್ಲಿ ಬೀಜ ಮತ್ತು ಹೂವುಗಳನ್ನು ಒಳಗೊಂಡ 130 ಗ್ರಾಮ್ ಒಣ ಗಾಂಜಾವನ್ನು ಜಪ್ತಿಪಡಿಸಿ, ಆರೋಪಿಯನ್ನು ದಸ್ತಗೀರಿ ಮಾಡಿ, ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತೆ ಶೈಲಜಾ ಕೋಟೆ ನಿರ್ದೇಶನದಂತೆ, ಉಪ ಆಯುಕ್ತೆ ವನಜಾಕ್ಷಿ ಎಮ್. ಮಾರ್ಗದರ್ಶನದಲ್ಲಿ, ಅಬಕಾರಿ ಉಪ ಅಧೀಕ್ಷಕ ಆರ್ ವಿ ತಳೇಕರ್ ದಾಳಿ ನಡೆಸಿದ್ದು, ಶಿರಸಿ ಉಪ ವಿಭಾಗದ ಅಬಕಾರಿ ನಿರೀಕ್ಷಕ ಮಹೇಂದ್ರ ಎಸ್. ನಾಯ್ಕ, ಸಿಬ್ಬಂದಿಗಳಾದ ಎನ್.ಕೆ.ವೈದ್ಯ, ಲೋಕೇಶ್ವರ ಬೋರ್ಕರ್, ಗಜಾನನ ನಾಯ್ಕ, ಅಬ್ದುಲ್ ಮಕಾನದಾರ, ಈರಣ್ಣ ಗಾಳಿ ಮತ್ತು ಧ್ರುವ ಪಾಲ್ಗೊಂಡಿದ್ದರು.