ಶಿರಸಿ: ತಾಲೂಕಿನ ಬಂಡಲ್ ಗ್ರಾಮದ ಕಲ್ಲೇಶ್ವರ ದೇವಸ್ಥಾನ ಹಾಗೂ ಓಣಿ ವಿಶ್ಲೇಶ್ವರ ಗ್ರಾಮದ ಗಣಪತಿ ದೇವಸ್ಥಾನದಲ್ಲಿ ಕಳವು ಮಾಡಿದ್ದ ಇಬ್ಬರು ಅಂತರ್ ಜಿಲ್ಲಾ ದೇವಸ್ಥಾನ ಹಾಗೂ ಬೈಕ್ ಕಳ್ಳರನ್ನು ನಿನ್ನೆ ರಾತ್ರಿ ಗ್ರಾಮೀಣ ಠಾಣಾ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಜಮ್ಮನಹಳ್ಳಿಯ ಲಿಂಗರಾಜು ರಾಮೇಗೌಡ ಹಾಗೂ ಶಿರಸಿ ಕೊಂಡಲಿಗಿಯ ಪ್ರವೀಣ್‍ಕುಮಾರ್ ನಾಯ್ಕ ಬಂಧಿತರು. ಆರೋಪಿ ಲಿಂಗರಾಜು ಮುಂಡಗೋಡ, ಹಳೇಬೀಡು, ಹುಬ್ಬಳ್ಳಿ, ವಿಜಾಪುರ, ಗದಗ, ಗೋಕಾಕಗಳಲ್ಲಿ ಬೈಕ್ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದು, ಮುಂಡಗೋಡ ಹಾಗೂ ಹಳೇಬೀಡು ಪೆÇಲೀಸ್ ಠಾಣಾ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 3 ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ ಮೇಲೆ ಈ ಹಿಂದೆ ಬೇಲೂರು ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಮಂಕಿ, ಮೂಡಬಿದಿರೆ, ಬಿಜಾಪುರಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿತ್ತು. ಇನ್ನೋರ್ವ ಆರೋಪಿ ಮಹಾರಾಷ್ಟ್ರದ ಸಾಂಗ್ಲಿಯ ಅಜಿತ್ ಎನ್ನುವಾತ ತಲೆಮಾರೆಸಿಕೊಂಡಿದ್ದು, ತನಿಖೆ ಮುಂದುವರೆದಿದೆ.