ಶಿರಸಿ: ‘ಇಲಕ್ಟೋರಲ್ ಲಿಟರಸಿ ಕ್ಲಬ್’ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ಇದರ ಅಡಿಯಲ್ಲಿ ಶಾಲಾ ಸಂಸತ್ತಿನ ಚುನಾವಣೆ ಮತ್ತು ಆಯ್ಕೆಯ ಪ್ರಕ್ರಿಯೆ ನಡೆಯಿತು. 7ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಮತದಾನ ನಡೆಸಿ ಶಾಲಾ ಸಂಸತ್ತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿಗಳಿಗೆ ಮತದಾನದ ಪ್ರಕ್ರಿಯೆಗಳ ಕುರಿತು ಅರಿವು ಮೂಡಿಸಲು ಶಾಲಾ ಸಂಸತ್ತಿನ ಪ್ರಕ್ರಿಯೆ ಸಹಕಾರಿಯಾಯಿತು. ಶಾಲಾ ಪ್ರಧಾನ ಮಂತ್ರಿಯಾಗಿ 10ನೇ ತರಗತಿಯ ಲಕ್ಷ್ಮೀಶ್ ಶೇಟ್ ಹಾಗೂ ಉಪ ಪ್ರಧಾನ ಮಂತ್ರಿಯಾಗಿ 10ನೇ ತರಗತಿಯ ಶ್ರೇಯಸ್ ಶಾನಭಾಗ್, ಸಾಂಸ್ಕೃತಿಕ ಮಂತ್ರಿಯಾಗಿ 10ನೇ ತರಗತಿಯ ಯಶಸ್ವಿನಿ ಹೆಗಡೆ, ಶಿಸ್ತು ಪಾಲನಾ ಮಂತ್ರಿಯಾಗಿ 10ನೇ ತರಗತಿಯ ರಚಿತಾ ಭಟ್ ಆಯ್ಕೆಯಾದರು. ಮುಖ್ಯೋಪಾಧ್ಯಾಯರಾದ ಶಾಂತಾರಾಮ್ ನಾಯ್ಕ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯದರ್ಶಿ ಎಲ್ ಎಂ ಹೆಗಡೆ ಅಧಿಕಾರ ಶಾಹಿ, ವಂಶಾಡಳಿತ, ಪ್ರಜಾ ಪ್ರಭುತ್ವ ಆಡಳಿತ ಮಾದರಿಯ ಬಗ್ಗೆ ವಿವರಿಸಿದರು.