ಯಲ್ಲಾಪುರ: ಭಾರತೀಯ ಜನತಾ ಪಾರ್ಟಿ ಕುಂದರಗಿ ಘಟಕದಿಂದ ನರೇಂದ್ರ ಮೋದಿಜಿಯರ ಜನ್ಮದಿನದ ಪ್ರಯಕ್ತ ಭರತನಹಳ್ಳಿ ದೇವಸ್ಥಾನದಲ್ಲಿ 71 ದೀಪ ಹಚ್ಚುವ ಕಾರ್ಯಕ್ರಮ, ದೀನ ದಯಾಳ್ ಉಪಾಧ್ಯಾಯರವರ ಜನ್ಮದಿನದ ಪ್ರಯಕ್ತ ಸಂಸ್ಮರಣಾ ಕಾರ್ಯಕ್ರಮ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ಭರತನಹಳ್ಳಿ ಭ್ರಮರಾಂಭ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಪ್ರಗತಿ ವಿದ್ಯಾಲಯ ಭರತನಹಳ್ಳಿ ಹೈಸ್ಕೂಲ್’ನ ಈ ಸಾಲಿನ ಅತ್ಯುತ್ತಮ ಅಂಕ ಪಡೆದ ಏಳು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ವಿಕೇಂದ್ರಿಕರಣ ಪಂಚಾಯತ್ ರಾಜ್ ಉಪಾಧ್ಯಕ್ಷ ಪ್ರಮೋದ ಹೆಗಡೆ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಭಟ್, ತಾಲೂಕು ಕಾರ್ಯದರ್ಶಿ ನಟರಾಜ್ ಗೌಡರ್, ಗ್ರಾಮ ಪಂಚಾಯತ್ ಸದಸ್ಯರು, ಕಾರ್ಯದರ್ಶಿ ಗಣೇಶ್ ಹೆಗಡೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ದೀಪಾ ನಾಯ್ಕ, ಉಪಾಧ್ಯಕ್ಷ ದಾಕ್ಲು ಪಾಟೀಲ್, ಕುಂದರಗಿ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ ಕುಮಾರ್ ಗೌಡರ್, ಸೀತಾರಾಮ್ ಗೌಡ್, ಸದಸ್ಯರಾದ ಗಣಪತಿ ಪಾಟೀಲ್, ರಾಮಕೃಷ್ಣ ಹೆಗಡೆ, ಪ್ರಕಾಶ್ ನಾಯ್ಕ, ನಿರ್ಮಲಾ ನಾಯ್ಕ, ಸೌಮ್ಯ ಕೃಷ್ಣ ನಾಯ್ಕ, ಮಾಸ್ತ್ಯಪ್ಪ ಮಡಿವಾಳ, ಜಿಲ್ಲಾ ತಾಲೂಕು ಪಕ್ಷದ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು ಹಾಗೂ ಪಕ್ಷದ ಕಾರ್ಯಕರ್ತರು ಸೇವೆ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. ಅರುಣ ಕುಮಾರ್ ಗೌಡರ್ ನಿರೂಪಣೆ ಮಾಡಿ ನಟರಾಜ್ ಗೌಡರ್ ಸ್ವಾಗತಿಸಿದರು. ರಾಘು ಕುಂದರಗಿ ಪ್ರತಿಜ್ಞಾ ವಿಧಿ ಹೇಳಿಕೊಟ್ಟು ವಂದಿಸಿದರು.