ಕಾರವಾರ: 2021ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಲಹಾ ಸಮಿತಿ ರಚಿಸಲಾಗಿದ್ದು, ಈ ಸಮಿತಿಯ ಸದಸ್ಯರಾಗಿ ಹಿರಿಯ ವಕೀಲ ನಾಗರಾಜ ನಾಯಕ ಆಯ್ಕೆಯಾಗಿದ್ದಾರೆ.
ವಿವಿಧ ಕ್ಷೇತ್ರಗಳ 32 ಸದಸ್ಯರ ಆಯ್ಕೆ ಸಲಹಾ ಸಮಿತಿ ರಚಿಸಿ ಸರಕಾರ ಆದೇಶ ಹೊರಡಿಸಿದೆ. ಕನಿಷ್ಠ 60 ವರ್ಷ ಮೇಲ್ಪಟ್ಟಿರುವ 66 ಜನರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಕೊಡಲಾಗುವುದು ಎಂದು ಸರಕಾರ ಈಗಾಗಲೇ ತೀರ್ಮಾನಿಸಿದೆ.
ಆಯ್ಕೆ ಸಮಿತಿ ಸಭೆ ಸೇರಿದಂತೆ ಪೂರ್ಣ ವಿವರಗಳ ಕುರಿತು ಸರಕಾರ ಇನ್ನಷ್ಟೆ ಮಾಹಿತಿ ನೀಡಬೇಕಿದೆ.