ಶಿರಸಿ: ತಾಲೂಕಿನಲ್ಲಿ ಸೆ.29ಕ್ಕೆ 5,000 ಡೋಸ್ ವ್ಯಾಕ್ಸಿನ್ ಲಭ್ಯವಿದ್ದು, ಪ್ರಥಮ ಮತ್ತು ದ್ವಿತೀಯ ಡೋಸ್ ಪಡೆದುಕೊಳ್ಳುವವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 5000 ಡೋಸ್ ಲಸಿಕೆಯನ್ನು ಹನುಮಂತಿ 50, ದೇವನಳ್ಳಿ 50, ಪ್ರಾಥಮಿಕ ಆರೋಗ್ಯ ಕೇಂದ್ರ ಬನವಾಸಿಯಲ್ಲಿ 500, ಸಾಲ್ಕಣಿ ಸ್ತ್ರೀ ಶಕ್ತಿ ಭವನದಲ್ಲಿ 270, ಪ್ರಾಥಮಿಕ ಆರೋಗ್ಯ ಕೇಂದ್ರ ಸಾಲ್ಕಣಿಯಲ್ಲಿ 160, ದಾಸನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ 60, ಅಂಡಗಿ ಸಭಾಭವನ 290, ಪ್ರಾಥಮಿಕ ಆರೋಗ್ಯ ಕೇಂದ್ರ ಹುಲೇಕಲ್’ನಲ್ಲಿ 100, ಪ್ರಾಥಮಿಕ ಆರೋಗ್ಯ ಕೇಂದ್ರ ಬಿಸಲಕೊಪ್ಪ 240, ಶಂಬುಲಿಂಗ ದೇವಸ್ಥಾನ ದೊಡ್ನಳ್ಳಿ 260, ಪ್ರಾಥಮಿಕ ಆರೋಗ್ಯ ಕೇಂದ್ರ ರೇವಣಕಟ್ಟಾ 70, ಮಂಜಗುಣಿ 180, ಕಕ್ಕಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ 30, ಮೆಣಸಿ ಪ್ರಾಥಮಿಕ ಆರೋಗ್ಯ ಕೇಂದ್ರ 20, ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರ 40, ಕಾನಗೋಡ ಗ್ರಾ.ಪಂ ಸಭಾಭವನ 120, ಉಂಚಳ್ಳಿಯಲ್ಲಿ 60,
ಶಿರಸಿ ನಗರದ ರಾಮನಗರ ಅಂಗನವಾಡಿ ಕೇಂದ್ರದಲ್ಲಿ 400, ಮರಾಠಿಕೊಪ್ಪ ಶಾಲೆಯಲ್ಲಿ 400, ರುದ್ರದೇವರ ಮಠದಲ್ಲಿ 500, ಯಲ್ಲಾಪುರ ರಸ್ತೆ ಅಂಬೇಡ್ಕರ ಭವನದಲ್ಲಿ 500, ಹುಬ್ಬಳ್ಳಿ ರಸ್ತೆ ಹಳೆ ಅಂಬೇಡ್ಕರ್ ಭವನದಲ್ಲಿ 350, ಕಸ್ತೂರಬಾ ನಗರ ಶಾಲೆಯಲ್ಲಿ 350 ಡೋಸ್ ಲಸಿಕೆ ಲಭ್ಯವಿದೆ ಎಂದು ತಿಳಿಸಿದ್ದಾರೆ.