ಶಿರಸಿ: ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ(ರಿ). ಶಿರಸಿ ಜಿಲ್ಲಾ ಮತ್ತು ತಾಲೂಕಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಗರದ ಜೆಎಂಜೆ ಕಾಲೇಜಿನಲ್ಲಿ ಗುರುವಂದನಾ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು ಕ್ರೀಡಾ ಸ್ಫರ್ಧೇಯ ಬಹುಮಾನ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ ಉಪೇಂದ್ರ ಪೈ ಮಾತನಾಡಿ ಮುಂದಿನ ದಿನಗಳಲ್ಲಿ ಖಾಸಗಿ ಶಾಲಾ ಶಿಕ್ಷಕರ ಸಂಘ ಸಾಂಸ್ಕøತಿಕ ಚಟುವಟಿಕೆಯನ್ನೂ ನಡೆಸಲಿ, ಹಾಗೂ ಶಿರಸಿ ಜಿಲ್ಲೆಯ ರಚನೆಗೆ ಕೈ ಜೋಡಿಸಿ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಭಟ್ಟ ಮಾತನಾಡಿ ಸಂಘಟನೆಯ ಮಹತ್ವ, ಅನಿವಾರ್ಯತೆಯ ಕುರಿತು ಮಾತನಾಡಿದರು. ಹಾಗೂ ವಿಶಾಲ್ ಮರಾಠೆ ಯುವ ಉದ್ಯಮಿ ಯವರು ನೀಡಿದ ಗುರು ಕಾಣಿಕೆಗೆ ಧನ್ಯವಾದ ಹೇಳಿದರು. ಅತಿಥಿಗಳಾದ ಉಪೆಂದ್ರ ಪೈ ಉದ್ಯಮಿ ಸಿಸ್ಟರ್ ಅಮಲಾ ಕರ್ನಲ್ ಇವರಿಗೆ ಗೌರವ ಕಾಣಿಕೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಎಲ್ಲಾ ಶಿಕ್ಷಕರಿಗೂ ಉಪೇಂದ್ರ ಪೈ ಗುರು ವಂದನೆಯ ಕಾಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಲೀಲಾವತಿ ಭಟ್ಟ ಲಯನ್ಸ, ಸಾಲ್ವಾದೋರ್ ಫರ್ನಾಂಡೀಸ್ ಡಾನ್ಬಾಸ್ಕೋ, ಸಿ.ಟಿ.ಜಯಣ್ಣ ಡಾನಬೋಸ್ಕೋ, ಬರ್ತಾ ಫರ್ನಾಂಡೀಸ್ ಇಕ್ರಾ, ಕಾರ್ಮೆಲಿನ್ ಸಾಲ್ವಾದೋರ್ ಫರ್ನಾಂಡೀಸ್ ಸೆಂಟ್ ಆಂಥೋನಿ, ಮೋಹನ್ ಹೆಗಡೆ ಲಯನ್ಸ ಇವರಿಗೆ ಸನ್ಮಾನ ಮಾಡಲಾಯಿತು.
ಕ್ರೀಡಾ ಸ್ಪರ್ಧೆಯ ವಿಜೇತರ ಯಾದಿ ಹೀಗಿದೆ: ಚೆಸ್ ಪುರುಷರ ವಿಭಾಗ: ಸುನೀಲ್ ಎಸ್ ಗೌಡರ್ ಪ್ರಥಮ, ಕಮಲಾಕರ ಪಟಗಾರ್ ದ್ವಿತೀಯ, ಟೆಬಲ್ ಟೆನಿಸ್: ಸಿಂಗಲ್ಸ ಫಾದರ್ ಸಂದೇಶ್ ಪ್ರಥಮ, ಸಂತೋಷ್ ಕೆ.ಆಯ್. ದ್ವಿತೀಯ. ಪುರುಷರ ಡಬಲ್ಸ ಸಂತೋಷ್ ಕೆ.ಆಯ್. ಮತ್ತು ಪ್ರದೀಪ್ ನಾಯಕ್ ಪ್ರಥಮ, ಮಿಕ್ಸ್ಡ ಡಬಲ್ಸ ಪ್ರದೀಪ್ ನಾಯಕ ಮತ್ತು ಸಂತೋಷ ಕೆ.ಆಯ್. ಪ್ರಥಮ, ದೀಲೀಪ್ ಭಟ್ಟ ಮತ್ತು ವಿವೇಕ ಶೇಟ್, ದ್ವಿತೀಯ. ಮಿಕ್ಸ್ಡ ಡಬಲ್ಸ್ ಪ್ರದೀಪ ನಾಯಕ ಮತ್ತು ಸುಜಾತ ಆಚಾರಿ ಪ್ರಥಮ. ಪೂರ್ಣಿಮಾ ಹೆಗಡೆ ಮತ್ತು ಸಂತೋಷ್ ಕೆ.ಆಯ್. ದ್ವಿತೀಯ. ಚೆಸ್ ಮಹಿಳೆಯರ ವಿಭಾಗ: ವಿದ್ಯಾವತಿ ಭಟ್ಟ ಪ್ರಥಮ, ಮಾಧುರಿ ಪರಾಂಜಪೆ ದ್ವಿತೀಯ. ಟೇಬಲ್ ಟೆನಿಸ್ ಸಿಂಗಲ್ಸ ಸುಜಾತ ಆಚಾರಿ ಪ್ರಥಮ, ದ್ವಿತೀಯ ಪೂರ್ಣಿಮಾ ಹೆಗಡೆ. ಮಹಿಳೆಯರ ಡಬಲ್ಸ ಪ್ರಥಮ ಸುಜಾತ ಆಚಾರಿ ಮತ್ತು ಪೂರ್ಣಿಮಾ ಹೆಗಡೆ ವಿಜೇತರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಶಾಂತಾರಾಮ ನಾಯ್ಕ, ಅಧ್ಯಕ್ಷ ಶಶಾಂಕ ಹೆಗಡೆ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಭಟ್ಟ, ತಾಲೂಕಾ ಕಾರ್ಯದರ್ಶಿ ವಿನೋದ್ ಡಯಾಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂತೋಷ್ ಕೆ.ಆಯ್. ಜಿಲ್ಲಾ ಖಜಾಂಚಿ ಪ್ರದೀಪ್ ನಾಯಕ್, ಶೈಕ್ಷಣಿಕ ಕಾರ್ಯದರ್ಶಿ ಸುಜಾತಾ ಆಚಾರಿ, ಸಿಸ್ಟರ್.ಜಿ.ಜಿ. ಪ್ರಾಶುಂಪಾಲರು ಜೆ.ಎಂ.ಜೆ ಉಪಸ್ಥಿತರಿದ್ದರು. ಪೂರ್ಣಿಮಾ ಹೆಗಡೆ ನಿರೂಪಿಸಿದರು. ಸೀತಾ ಭಟ್ಟ ಸ್ವಾಗತಿಸಿದರು. ಕಲಾವತಿ ಶಾಸ್ತ್ರಿ ವಂದಿಸಿದರು.