ಶಿರಸಿ: ಭಾರತೀಯ ಜನತಾ ಪಾರ್ಟಿ ಶಿರಸಿ ಗ್ರಾಮೀಣ ಮಂಡಲದಿAದ ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮದ ಅಡಿಯಲ್ಲಿ ಇತ್ತೀಚೆಗೆ ಜಾನ್ಮನೆ ಮಹಾಶಕ್ತಿ ಕೇಂದ್ರದ ಸಂಪಖoಡದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 52 ಜನರು ಭಾಗಿಯಾಗಿ ರಕ್ತದಾನ ಮಾಡಿದರು.
ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ವೆಂಕಟೇಶ ನಾಯಕ, ಡಾಕ್ಟರ್ ಸುಮನ್ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೋವಿಂದ ನಾಯ್ಕ, ಚಂದ್ರು ಎಸಳೆ, ಶಿವಮೊಗ್ಗ ಜಿಲ್ಲಾ ಸಹ ಪ್ರಭಾರಿ ಆರ್. ಡಿ. ಹೆಗಡೆ, ಗ್ರಾಮೀಣ ಮಂಡಲದ ಅಧ್ಯಕ್ಷರಾದ ಎನ್. ವಿ. ಹೆಗಡೆ, ಪರಿಸರಸ್ನೇಹಿ ಕಾರ್ಯದ ಜಿಲ್ಲಾ ಸಂಚಾಲಕರಾದ ನಾಗರಾಜ ನಾಯಕ ತೋರ್ಕೆ, ಪಂಡಿತ್ ದಿನದಯಾಳ್ ಉಪಾಧ್ಯಾಯರ ಜಂಯತಿಯ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ಎಮ್. ಜಿ. ಭಟ್, ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಘುಪತಿ ಹೆಗಡೆ, ರಮೇಶ್ ನಾಯ್ಕ, ದಾನಂದ್ ಭಟ್ಟ, ಶಿಬಿರದ ತಾಲೂಕ್ ಸಂಚಾಲಕರಾದ ಸತೀಶ ನಾಯ್ಕ್ ಔಢಾಳ ಹಾಗೂ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು ಉಪಸ್ಥಿತರಿದ್ದರು.