ಕುಮಟಾ: ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ತೆರಳುತ್ತಿರುವ ಕಾರಿಗೆ ಅಡ್ಡಬಂದ ಆಕಳನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ ಐವರು ಗಾಯಗೊಂಡ ಘಟನೆ ಕುಮಟಾ ತಾಲೂಕಿನ ಮಿರ್ಜಾನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಬಾಣಾವಾರದ ನಿವಾಸಿ ಕೃಷ್ಣಮೂರ್ತಿ ಬಿ. ಆರ್, ವಿನಯ್ ಕಸ್ತೂರಪ್ಪ, ರಘು ಬಿ. ಆರ್, ಸುಜ ಗಂಗಾಧರ ಹಾಗೂ ಚಾಲಕ ಕಲ್ಲೇಶ ಕಾಂತರಾಜು ಗಾಯಗೊಂಡವರಾಗಿದ್ದಾರೆ. ಒಮ್ಮೆಲೆ ಬ್ರೇಕ್ ಹಾಕಿದ ಕಾರಣ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಗಾಯಾಳುಗಳನ್ನು ೧೦೮ ಅಂಬ್ಯುಲೆನ್ಸ್ ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಪಿಎಸ್ಐ ರವಿ ಗುಡ್ಡಿ ಭೇಟಿ ನೀಡಿ, ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ
ನಿಯಂತ್ರಣ ತಪ್ಪಿ ಕಾರ್ ಪಲ್ಟಿ ಸವಾರರಿಗೆ ಪೆಟ್ಟು
