• first
    second
    third
    previous arrow
    next arrow
  • ರುಚಿಯಾದ ಬೆಂಡೆಕಾಯಿ ಸಾಸಿವೆ ಮಾಡಿ ಸವಿದು ನೋಡಿ

    300x250 AD

    ಅಡುಗೆ ಮನೆ: ಬೇಕಾಗುವ ಸಾಮಗ್ರಿಗಳು: 15 ಬೆಂಡೆಕಾಯಿ, 1 ಟೇಬಲ್ ಸ್ಪೂನ್-ಎಣ್ಣೆ, ಕರಿಬೇವಿನ ಎಲೆ-5 ಎಸಳು, ಅರ್ಧ ಕಪ್-ತೆಂಗಿನಕಾಯಿ ತುರಿ, ಹಸಿಮೆಣಸು- 3, ಸಾಸಿವೆ-1 ಟೀ ಸ್ಪೂನ್, ಮೊಸರು-1/2 ಕಪ್, ಉದ್ದಿನಬೇಳೆ-1/2 ಟೀ ಸ್ಪೂನ್, ನೀರು ಕಾಲು ಕಪ್, ಉಪ್ಪು ರುಚಿಗೆ ತಕ್ಕಷ್ಟು.

    ಮಾಡುವ ವಿಧಾನ: ಮೊದಲಿಗೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ನೀರಿನ ಪಸೆ ಇಲ್ಲದಂತೆ ಒರೆಸಿ ತೆಗೆಯಿರಿ. ನಂತರ ಬೆಂಡೆಕಾಯಿಯನ್ನು ಮಧ್ಯಕ್ಕೆ ಸೀಳಿಕೊಂಡು ಚಿಕ್ಕದಾಗಿ ಕತ್ತರಿಸಿಕೊಳ್ಳಿ, ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಅರ್ಧ ಟೀ ಸ್ಪೂನ್ ಎಣ್ಣೆ ಹಾಕಿ. ನಂತರ ಕರಿಬೇವು ಹಾಕಿ ಬೆಂಡೆಕಾಯಿ ಹಾಕಿ ಎಣ್ಣೆಯಲ್ಲಿ ಹುರಿದುಕೊಳ್ಳಿ, ಬೆಂಡೆಕಾಯಿ ಲೋಳೆ ಹೋಗುವವರೆಗೆ ಹುರಿದುಕೊಳ್ಳಿ, ಇದು ತಣ್ಣಗಾದ ನಂತರ ಒಂದು ಪಾತ್ರೆಗೆ ತೆಗೆದಿಟ್ಟುಕೊಳ್ಳಿ.

    300x250 AD


    ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, 2 ಟೀ ಸ್ಪೂನ್ ಸಾಸಿವೆ, ಹಸಿಮೆಣಸು ಹಾಕಿ ನೀರು ಸೇರಿಸದೇ ಚೆನ್ನಾಗಿ ರುಬ್ಬಿಕೊಳ್ಳಿ, ನಂತರ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ, ಆಮೇಲೆ ಈ ಮಿಶ್ರಣವನ್ನು ಬೆಂಡೆಕಾಯಿಗೆ ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
    ನಂತರ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಒಗ್ಗರಣೆ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕರಿಬೇವು, ಉದ್ದಿನ ಬೇಳೆ ಹಾಕಿ ನಂತರ ಈ ಒಗ್ಗರಣೆಯನ್ನು ಬೆಂಡೆಕಾಯಿ ಮಿಶ್ರಣಕ್ಕೆ ಸೇರಿಸಿದರೆ ರುಚಿಕರವಾದ ಬೆಂಡೆಕಾಯಿ ಸಾಸಿವೆ ಸವಿಯಲು ಸಿದ್ಧ.

    Share This
    300x250 AD
    300x250 AD
    300x250 AD
    Back to top