ಶಿರಸಿ: ಬಿಜೆಪಿ ಯುವಮೋರ್ಚಾ ಉತ್ತರ ಕನ್ನಡ ಇವರ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನದ ಅಂಗವಾಗಿ ನಡೆಯಲಿರುವ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ‘ಪಿ.ಎಂ. ನಮೋ ರಸಪ್ರಶ್ನೆ ಸ್ಫರ್ಧೆ’ ಅ.1 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು 18 ರಿಂದ 35 ವರ್ಷ ವಯೋಮಿತಿಯ ಯುವಕ ಯುವತಿಯರಾಗಿದ್ದು, ಸೆ.28 ಮಂಗಳವಾರದೊಳಗೆ ನೋಂದಣಿ ಮಾಡಿಕೊಳ್ಳಬೇಕು.
ಪ್ರಧಾನಿ ಮೋದಿಜಿಯವರ ಜೀವನ ಚರಿತ್ರೆ ಹಾಗೂ ಕೇಂದ್ರ ಸರಕಾರದ ಸಾಧನೆಯ ಕುರಿತು ಪ್ರಶ್ನೆಗಳು ಇರಲಿದ್ದು, ನಿರ್ಣಾಯಕರ ತೀರ್ಮಾನವೇ ಅಂತಿಮ. ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನವಿದ್ದು, ಭಾಗವಹಿಸಿದ ಎಲ್ಲಾ ಸ್ಪರ್ಧಾರ್ಥಿಗಳಿಗೂ ಅಭಿನಂದನಾ ಪತ್ರ ನೀಡಲಾಗುವುದು. ಹೆಸರು ಮತ್ತು ವಿಳಾಸದೊಂದಿಗೆ https://docs.google. com/forms/d/e/1FAIpQLSd7Ple_6-5Pueb8z0bqfJtqTgS60-aLk-10zTmBbWxeqGgGcg/viewform?usp=sf_link ಮೂಲಕ ನೋಂದಣಿ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಆದಿತ್ಯ ಶೇಟ್: 8217009061, ರಘುಪತಿ ಹೆಗಡೆ 9483805052 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.