ಶಿರಸಿ: ವಿಶ್ವ ಹೃದಯ ದಿನದ ಅಂಗವಾಗಿ ಒಂದು ದೇಶ, ಒಂದು ದಿನ, ಒಂದು ಮಿಲಿಯನ್ ರಕ್ತ ಪರೀಕ್ಷೆ ಮಹಾಭಿಯಾನದ ಅಂಗವಾಗಿ ರೋಟರಿ ಇಂಡಿಯಾ, ಆರ್.ಎಸ್.ಎಸ್.ಡಿ.ಐ. ಸಹಯೋಗದಲ್ಲಿ ರೋಟರಿ ಕ್ಲಬ್ ನೇತೃತ್ವದಲ್ಲಿ ಐ.ಎಂ.ಎ., ಶಿರಸಿ ಲಯನ್ಸ್ ಕ್ಲಬ್, ಇನ್ನರವ್ಹೀಲ್ ಕ್ಲಬ್ ಹಾಗೂ ಆರ್ಟ್ ಆಫ್ ಲಿವಿಂಗ್ ಇವುಗಳ ಸಹಯೋಗದಲ್ಲಿ ಸೆ.29 ಬುಧವಾರ ‘ಉಚಿತ ಮಧುಮೇಹ ರಕ್ತ ಪರೀಕ್ಷೆ ಅಭಿಯಾನ’ ನಡೆಯಲಿದೆ.
ಈ ಅಭಿಯಾನವು ಮುಂಜಾನೆ 9 ರಿಂದ 4 ಗಂಟೆವರೆಗೆ ನಡೆಯಲಿದ್ದು, ಶಿರಸಿ ನಗರದ ಶಿರಸಿಯ ಹಳೆಯ ಬಸ್‍ಸ್ಟ್ಯಾಂಡ, ಬಿಡಕಿ ಬೈಲ ತರಕಾರಿ ಮಾರ್ಕೆಟ, ಗಣೇಶನಗರ, ದೇವಿಕೆರೆ, ಶ್ರೀ ಮಾರಿಕಾಂಬಾ ದೇವಸ್ತಾನ, ಎ.ಪಿ.ಎಂ.ಸಿ ಮಾರ್ಕೇಟ ಯಾರ್ಡ, ಲಯನ್ಸ ಶಾಲೆ, ಇಂಡಸ್ಟ್ರಿಯಲ್ ಎಸ್ಟೇಟ ಬನವಾಸಿ ರಸ್ತೆ ಶಿರಸಿ, ಮಹಾಲಕ್ಷ್ಮೀ ಆಸ್ಪತ್ರೆ, ಗಣೇಶ ನೇತ್ರಾಲಯ ಕಣ್ಣಿನ ಆಸ್ಪತ್ರೆ, ಶಿರಸಿ ಸ್ಕ್ಯಾನ್ ಸೆಂಟರ, ಮಾರಿಕಾಂಬಾ ಅಸ್ಪತ್ರೆ, ರೋಟರಿ ಆಸ್ಪತ್ರೆ, ಎಮ್.ಇ.ಎಸ್. ಕಾಲೇಜ ಮುಂತಾದ ವಿವಿಧ 16 ಕೇಂದ್ರಗಳಲ್ಲಿ ನಡೆಯಲಿದೆ.
ತಪಾಸಣಿ ನಡೆಸಿದ ಕೆಲವು ಕ್ಷಣಗಳಲ್ಲಿ ಸ್ಥಳದಲ್ಲಿಯೇ ರಿಪೋರ್ಟ್ ಲಭ್ಯವಾಗಲಿದ್ದು, ಕಾಯಿಲೆ ಉಳ್ಳವರಿಗೆ ಸೂಕ್ತ ಚಿಕಿತ್ಸೆಗಾಗಿ ಸಲಹೆ, ಸಮಾಲೋಚನೆ ಮತ್ತು ಔಷದೋಪಚಾರ ವ್ಯವಸ್ಥೆ ಕೂಡಾ ಮಾಡಲಿದ್ದಾರೆ.