ಯಲ್ಲಾಪುರ: ಇಲ್ಲಿನ ನೂತನ ನಗರ ಪ್ರದೇಶದ ಅರಣ್ಯದಲ್ಲಿನ ಸಾರ್ವಜನಿಕ ಪ್ರದೇಶದಲ್ಲಿ ಜುಗಾರಿ ಆಟವಾಡುತ್ತಿದ್ದ ಐವರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ ಪೊಲಿಸರು, ಆರೋಪಿಗಳಿಂದ ಆಟಕ್ಕೆ ಬಳಸುತ್ತಿದ್ದ ನಗದು ಹಣ ಹಾಗೂ ಪರಿಕರಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳನ್ನು ಯಮನೂರು ತಂದೆ ಹನುಮಂತಪ್ಪ ಬೋವಿವಡ್ಡರ್ ಕಾಳಮ್ಮನಗರ, ಮರ್ದಾನ್ ಸಾಬ್ ತಂದೆ ಅಮೀರ್ ಶೇಕ್ ಕಾಳಮ್ಮನಗರ, ಮಂಜುನಾಥ ತಂದೆ ಪರಮೇಶ್ವರ ನಾಯ್ಕ ಕಾಳಮ್ಮನಗರ, ಮಹ್ಮದ್ ರಫೀಕ್ ತಂದೆ ಅಬ್ದುಲ್ ರೆಹಮಾನ್ ಸೈಯದ್ ನೂತನನಗರ, ಶಫಿ ತಂದೆ ಮಹ್ಮದ್ ಶೇಕ್ ನೂತನ ನಗರ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 2,800 ರೂ ನಗದು ಹಣ ಹಾಗೂ ಇಸ್ಪಿಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.