• Slide
    Slide
    Slide
    previous arrow
    next arrow
  • ಏಕ ಬೆಳೆಯಿಂದ ಅಭಿವೃದ್ಧಿ ಅಸಾಧ್ಯ; ಸಂತೋಷ ಕುಮಾರ

    300x250 AD

    ಕುಮಟಾ: ಕೃಷಿ ಉತ್ಪಾದನೆ, ರೈತರ ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟ ಸುಧಾರಿಸಲು ಏಕ ಬೆಳೆ ಅವಲಂಬನೆ ಬಿಟ್ಟು ಸಮಗ್ರ ಕೃಷಿ ಬೆಳೆಯುವುದನ್ನು ಅವಲಂಬಿಸಿಕೊಳ್ಳಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವೀಚಾರಕರಾದ ಸಂತೋಷ ಕುಮಾರ ನುಡಿದರು.


    ಅವರು ಇತ್ತಿಚಿಗೆ ತಾಲೂಕಿನ ಬ್ರಹ್ಮೂರು ಗ್ರಾಮದಲ್ಲಿ ಹಮ್ಮಿಕೊಂಡ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಸವiಗ್ರ ಕೃಷಿ ಬೆಳೆಯಿಂದ ಆಗುವ ಅನುಕೂಲದ ಬಗ್ಗೆ ಮಾಹಿತಿ ನೀಡುತ್ತ ಅನಿಶ್ಚಿತ ಮಳೆ ಮಳೆ ಹವಾಮಾನ ವೈಪರಿತ್ಯಗಳಿಂದ ಕೃಷಿ ಉತ್ಪಾದನೆ ಸುಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದು, ಕೇವಲ ಒಂದು ಬೆಳೆಗಳಿಂದ ಬರುತ್ತಿರುವ ಉತ್ಪಾದನೆ ಹಾಗೂ ಆದಾಯ ಕುಂಠಿತಗೊಳ್ಳುತ್ತಿದ್ದು, ಕಾರಣ ಬೆಳೆಗಳ ಜೊತೆಗೆ ಕೃಷಿ ಅವಲಂಭಿತ ಉಪಕಸಬುಗಳ ಸೂಕ್ತ ಸಂಯೋಜನೆಯಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಸುಸ್ಥಿರ ಉತ್ಪಾದನೆ ಪಡೆದು ಆದಾಯವನ್ನು ಉತ್ತಮ ಪಡಿಸುವುದರ ಜೊತೆಗೆ ವರ್ಷ ಪೂರ್ತಿ ರೈತರ ಕುಟುಂಬಕ್ಕೆ ಉದ್ಯೋಗ ಸೃಷ್ಟಿಸಿ ಸ್ವಾವಲಂಬಿ ಜೀವನೋಪಾಯ ಪಡೆಯುವುದೇ `ಸಮಗ್ರ ಕೃಷಿ ಪದ್ಧತಿ’ಯ ಮೂಲ ಉದ್ಧೇಶವಾಗಿದೆ ಎಂದು ತಿಳಿಸಿದ ಅವರು ಬೆಳೆ ಆಧಾರಿತ ಸಮಗ್ರ ಕೃಷಿ ಪದ್ಧತಿಯಲ್ಲಿ ಬೆಳೆ ಉತ್ಪಾದನೆ ಮುಖ್ಯ ಗುರಿಯಾಗಿದ್ದು, ಇತರೆ ಪದ್ದತಿಗಳು ಬೆಳೆ ಉತ್ಪಾದನೆಗೆ ಪೂರಕವಾಗಿರುತ್ತದೆ. ಸೂಕ್ತವಾದ ಹಾಗೂ ಹೆಚ್ಚಿನ ಆದಾಯ ನೀಡಬಲ್ಲ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯು ಆಯಾ ಪ್ರದೇಶದ ಹವಾಗುಣ, ದೊರಕುವ ಇತರ ಪರಿಕರಗಳು ಇವುಗಳ ಮೇಲೆ ಅವಲಂಭಿತವಾಗಿದ್ದು, ಸಮಗ್ರ ಕೃಷಿ ಪದ್ಧತಿಯನ್ನು ಕೃಷಿ ವಲಯ ಆಧಾರಿತ ನೀರಾವರಿ ಆಧರಿತ ಪದ್ಧತಿ ಎಂದು ವಿಂಘಡಿಸುವ ಮೂಲಕ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

    300x250 AD


    ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ತಿಮ್ಮಣ್ಣ ನಾಯ್ಕ, ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮೂರು ಒಕ್ಕೂಟದ ಅಧ್ಯಕ್ಷರಾದ ನಾರಾಯಣ ಪಟಗಾರ ವಹಿಸಿಕೊಂಡಿದ್ದು, ಸ್ವಾಗತವನ್ನು ಮಿರ್ಜಾನ ವಲಯದ ಮೇಲ್ವೀಚಾರಕರಾದ ಗುರುರಾಜ ಎಮ್. ಧನ್ಯವಾದವನ್ನು ಸೇವಾಪ್ರತಿನಿಧಿಗಳಾದ ಗಣಪತಿ ನಾಯ್ಕ ಇವರು ನೆರವೇರಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top