ಶಿರಸಿ: ಉಡುಪಿಯ ಯಕ್ಷಗಾನ ಕಲಾರಂಗ ನೀಡುವ ಯಕ್ಷಗಾನ ಕಲಾರಂಗದ ಅರ್ಥಧಾರಿ ಪ್ರಶಸ್ತಿಯನ್ನು ಉಡುಪಿಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀ ಪಾದರು ಪ್ರದಾನ ಮಾಡಿದರು.
ಉಡುಪಿಯ ರಾಜಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮೇಲುಕೋಟೆ ಸಂಸ್ಕೃತ ಮಹಾ ವಿದ್ಯಾಲಯದ ನಿವೃತ್ತ ಸಂಸ್ಕೃತ ಪ್ರಾಚಾರ್ಯರಾಗಿ ನಿವೃತ್ತರಾದ ಪ್ರಸಿದ್ದ ಅರ್ಥಧಾರಿ ಉಮಾಕಾಂತ ಭಟ್ಟರಿಗೆ ಪ್ರದಾನ ಮಾಡಲಾಯಿತು. ಈ ವೇಳೆ ಮಂಗಳೂರು ವಿ.ಸಿ. ಪಿ.ಎಸ್.ಯಡಪಡಿತ್ತಾಯ ಇತರರು ಇದ್ದರು.
ಈ ವರ್ಷವಷ್ಟೇ ಕೆರೇಕೈ ಅವರಿಗೆ ಫಾಲಿಮಾರುಮಠದಿಂದ ರಾಘವಾನುಗ್ರಹ ಪ್ರಶಸ್ತಿ, ಸ್ವರ್ಣವಲ್ಲೀ ಸಂಸ್ಥಾನದ ಯಕ್ಷ ಶಾಲ್ಮಲಾದಿಂದ ಹೊಸ್ತೋಟ ಮಂಜುನಾಥ ಭಾಗವತ್ ಪ್ರಶಸ್ತಿ ಸ್ವೀಕಾರ ಮಾಡಿದ್ದರು. ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು 20 ಸಾ.ರೂ. ರೂಪಾಯಿ ನಗದನ್ನು ಒಳಗೊಂಡಿದೆ.