ಶಿರಸಿ : ಸ್ವರ್ಣವಲ್ಲೀಯ ರಾಜರಾಜೇಶ್ವರೀ ವಿದ್ಯಾ ಸಂಸ್ಥೆಯ ಅಂಗಸAಸ್ಥೆ ಶ್ರೀನಿಕೇತನ ಶಾಲೆಯ ಸಸ್ಯ ವೈವಿಧ್ಯ ಸಂರಕ್ಷಣಾ ವನದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿ ಅವರು ಗಿಡ ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಶ್ರೀನಿಕೇತನ ಶಾಲೆ ಹಾಗೂ ಲಿಯೊ ಕ್ಲಬ್ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವದಿಸಿದ ಶ್ರೀಗಳು ವನ ಸಂಪತ್ತೇ ಜೀವ ಸಂಪತ್ತಿನ ಮೂಲವಾಗಿದೆ. ಹಾಗಾಗಿ ವನವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ನುಡಿದರು.
ಶಾಲೆಯ ಕಾರ್ಯದರ್ಶಿ ಕೆ.ಎನ್. ಹೊಸಮನಿ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎನ್. ಜಿ. ಹೆಗಡೆ ಭಟ್ರಕೇರಿ, ಕಾರ್ಯದರ್ಶಿ ಶಿವರಾಮ ಭಟ್ಟ ಡೊಂಬೇಸರ, ಲೋಕೇಶ್ ಹೆಗಡೆ ಇತರರಿದ್ದರು.ಲಿಯೊ ಕ್ಲಬ್ನ ಸಲಹೆಗಾರ ಅಶೋಕ ಹೆಗಡೆ ಸ್ವಾಗತಿಸಿದರು. ಲಯನ್ ಪ್ರತಿಭಾ ಪ್ರಭಾಕರ ಹೆಗಡೆ ನಿರ್ವಹಿಸಿದರು.ಲಯನ್ ಕ್ಲಬ್ ಕಾರ್ಯದರ್ಶಿ ವಿನಯ ಹೆಗಡೆ ವಂದಿಸಿದರು.