ಸಿದ್ದಾಪುರ: ಹೆಗ್ಗರಣಿಯಿಂದ ಉಂಚಳ್ಳಿ ಜಲಪಾತಕ್ಕೆ ಹೋಗುವ ಪಿಡಬ್ಲೂಡಿ ರಸ್ತೆಯನ್ನು ಊರ ಗ್ರಾಮಸ್ಥರು ಶ್ರಮದಾನದ ಮೂಲಕ ದುರಸ್ಥಿ ಮಾಡಿದ ಅಪರೂಪದ ಪ್ರೇರಣಾದಾಯಿ ಘಟನೆ ಭಾನುವಾರ ನಡೆದಿದೆ.
ಉಂಚಳ್ಳಿ ಜಲಪಾತವನ್ನು ವೀಕ್ಷಿಸಲು ರಾಜ್ಯದ ನಾನಾ ಕಡೆಯಿಂದ ಆಗಮಿಸುತ್ತಿದ್ದು, ಅವರೆಲ್ಲವೂ ಹೊಂಡಗಳಿರುವ ರಸ್ತೆ ಮೂಲಕವೇ ಸಂಚಾರ ನಡೆಸಬೇಕಿತ್ತು. ಇದನ್ನು ಮನಗಂಡ ಸ್ಥಳೀಯರು ರಸ್ತೆಯಲ್ಲಿನ ಹೊಂಡಗಳನ್ನು ಮಣ್ಣಿನಿಂದ ತುಂಬಿ ನಾಗರಿಕ ಕರ್ತವ್ಯವನ್ನು ಮೆರೆದಿದ್ದು ಶ್ಲಾಘನೀಯ ಕಾರ್ಯವಾಗಿದೆ.
ಈ ಶ್ರಮದಾನದಲ್ಲಿ ಸ್ಥಳೀಯರಾದ ಸುನೀಲ, ದೇವರು, ಜಗ್ಗನಾಥ ಭಟ್ಟ, ಸಂದೀಪ, ಮನೋಜ, ಲಕ್ಷ್ಮಿಶ ಭಟ್ಟ, ಗಣೇಶ ಉಂಚಳ್ಳಿ, ಈಶ್ವರ ಚೆನ್ನಯ್ಯ, ಜೈರಾಮ್ ಚೆನ್ನಯ್ಯ ಮಾಸ್ತಿಬೈಲ್ ಸೇರಿದಂತೆ ಇನ್ನಿತರರು ಇದ್ದರು.
ಸ್ಥಳೀಯರ ಈ ಶ್ರಮದಾನ ಕಾರ್ಯವನ್ನು ‘e – ಉತ್ತರ ಕನ್ನಡ’ವು ಮುಕ್ತ ಮನಸ್ಸಿನಿಂದ ಅಭಿನಂದಿಸಿದ್ದು, ಇಂತಹ ಸಮಾಜಮುಖಿ ಕಾರ್ಯ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಕಳಕಳಿಯಾಗಿದೆ.