ಶಿರಸಿ :
ಉಪೇಂದ್ರ ಪೈ ಸೇವಾ ಟ್ರಸ್ಟ್ ನಗರದ ಯೂನಿಯನ್ ಪ್ರೌಢಶಾಲೆಯ 130 ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಇಂದು ಉಚಿತ ಪಠ್ಯ ಪುಸ್ತಕ ವಿತರಿಸಿದ ಅಧ್ಯಕ್ಷ ಉಪೇಂದ್ರ ಪೈ ಶಿಕ್ಷಣವೇ ದೇಶದ ಶಕ್ತಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವತ್ತ ಹೆಚ್ಚಿನ ಗಮನ ನೀಡಬೇಕು,ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹಿನ್ನಡೆ ಆಗಬಾರದು ಶಿಕ್ಷಕರು ಮತ್ತು ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಇಂದಿನ ವಿದ್ಯಾರ್ಥಿಗಳು ದೇಶದ ಸತ್ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಹೇಳಿದರು
ಸಂಸ್ಥೆಯ ವತಿಯಿಂದ ಉಪೇಂದ್ರ ಪೈ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಯೂನಿಯನ್ ಪ್ರೌಢಶಾಲೆಯ ಅಧ್ಯಕ್ಷ ಬಾಷಾ ಸಾಬ್, ಜಬೀವುಲ್ಲಾ ಖಾನ್, ಶಫೀ ಮುಲ್ಲಾ, ಶಾಲೆಯ ಹಿರಿಯ ಶಿಕ್ಷಕಿ ಖುತೇಚಾ ಜವಳಿ, ಶಿಕ್ಷಕ ಮತಿನ ಶೇಖ ಉಪಸ್ಥಿತರಿದ್ದರು.