• Slide
    Slide
    Slide
    previous arrow
    next arrow
  • ಯುಪಿಯಲ್ಲಿ ಮೂರು ತಿಂಗಳಲ್ಲಿ 6,500ಕ್ಕೂ ಹೆಚ್ಚು ಜನರಿಗೆ ಸಂಸ್ಕೃತ ಬೋಧನೆ

    300x250 AD

    ಲಕ್ನೋ: ಉತ್ತರ ಪ್ರದೇಶದಲ್ಲಿ ಸಂಸ್ಕೃತ ಭಾಷೆಯನ್ನು ಜನತೆಗೆ ಹತ್ತಾರವಾಗಿಸಲು ಬದ್ಧರಾಗಿರುವ ಯೋಗಿ ಆದಿತ್ಯನಾಥ್ ಸರ್ಕಾರ ಮೂರು ತಿಂಗಳಲ್ಲಿ 6,500 ಕ್ಕೂ ಹೆಚ್ಚು ಜನರಿಗೆ ಸರಳ ಸಂಸ್ಕೃತವನ್ನು ಕಲಿಸಿದೆ.

    ಸಂಸ್ಕೃತ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡುತ್ತಿದ್ದ ಈ ಜನರು ಈಗ ಪ್ರತಿದಿನ ಸಂಸ್ಕೃತದ ಪದಗಳನ್ನು ಸರಾಗವಾಗಿ ಹೇಳುತ್ತಿದ್ದಾರೆ ಮತ್ತು ಕೆಲವರು ಸಂಸ್ಕೃತದಲ್ಲಿ ಮಾತನಾಡುತ್ತಿದ್ದಾರೆ.

    ಸಂಸ್ಕೃತ ಸಂಸ್ಥೆಯ ಮಿಸ್ಡ್ ಕಾಲ್ ಸ್ಕೀಮ್ ಸಂಸ್ಕೃತದ ಕಡೆಗೆ ಜನರ ಆಸಕ್ತಿಯನ್ನು ಹೆಚ್ಚಿಸುತ್ತಿದೆ. ಹೀಗಾಗಿ ಸಂಸ್ಕೃತ ಕಲಿಯಲು ದಾಖಲಾಗುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಯುಪಿ ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

    300x250 AD

    ಕಳೆದ ಮೂರು ತಿಂಗಳಲ್ಲಿ ಮೊದಲ ಹಂತದ ಸಂಸ್ಕೃತ ಭಾಷಾ ಬೋಧನೆಗೆ ಒಟ್ಟು 17,480 ಜನರನ್ನು ನೋಂದಾಯಿಸಲಾಗಿದೆ. ಇವರಲ್ಲಿ 6,434 ಜನರು 132 ಆನ್‌ಲೈನ್ ತರಗತಿಗಳ ಮೂಲಕ ಶಿಕ್ಷಣ ಪಡೆದಿದ್ದಾರೆ. ಈ ತರಬೇತಿಯನ್ನು ಪ್ರತಿದಿನ ಒಂದು ಗಂಟೆಯ ವರ್ಚುವಲ್ ತರಗತಿಗಳ ಮೂಲಕ 20 ದಿನಗಳವರೆಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗಿದೆ.

    ವೈದ್ಯರು, ಎಂಜಿನಿಯರ್‌ಗಳು, ಉದ್ಯಮಿಗಳು, ವಿದ್ಯಾರ್ಥಿಗಳು ಅಥವಾ ಇತರ ವೃತ್ತಿಯಲ್ಲಿರುವ ಯಾವುದೇ ವ್ಯಕ್ತಿಗಳು ಸಂಸ್ಕೃತ ಮಾತನಾಡಲು, ಓದಲು ಮತ್ತು ಕಲಿಯಲು ಉಚಿತ ತರಬೇತಿ ಪಡೆಯಬಹುದು.

    ಉತ್ತರ ಪ್ರದೇಶದಲ್ಲಿ ಸಂಸ್ಕೃತ ಭಾಷೆಯ ಪ್ರಚಾರವು ಹೊಸ ಆಯಾಮ ಪಡೆಯುತ್ತಿದೆ ಮತ್ತು ಉತ್ತರ ಪ್ರದೇಶ ಸರ್ಕಾರವು ವಿದೇಶಿಗರಿಗೆ ಸಂಸ್ಕೃತ ಭಾಷೆಯನ್ನು ಕಲಿಯಲು ಮತ್ತು ಅಧ್ಯಯನ ಮಾಡಲು ಪ್ರೋತ್ಸಾಹವನ್ನೂ ನೀಡುತ್ತಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top