ಶಿರಸಿ: ನಗರದ ಪಡ್ತಿಗಲ್ಲಿಯ ಬಾವಿಯಲ್ಲಿ ಶವವೊಂದು ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಸಿದ್ದಾಪುರ ಮೂಲದ ಪುಂಡಲೀಕ ಅಂಬಿಗ ಎಂದು ಗುರುತಿಸಲಾಗಿದೆ.
ಬಳಕೆಯಿಲ್ಲದ ನಿವೇಶದಲ್ಲಿದ್ದ ತೆರೆದ ಬಾವಿಯಲ್ಲಿ ಶವ ತೇಲುತ್ತಿದ್ದು, ತೀವ್ರ ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಪೆÇಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ಆತ ನಿನ್ನ ಮೊಬೈಲ್‍ಗೆ ಕರೆನ್ಸಿ ಹಾಕಿಕೊಂಡು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವ ವಾಪಸ್ ಮನೆಗೆ ಬರದೇ ನಾಪತ್ತೆಯಾಗಿದ್ದ. ಕಾಣೆಯಾದ ಮಗನನ್ನು ಹುಡುಕಿಕೊಡುವಂತೆ ಸಿದ್ದಾಪುರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.