ಶಿರಸಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಭಾರತ ಕಿಸಾನ ಮೋರ್ಚ ಸೇರಿದಂತೆ ನಾನಾ ರೈತ ಸಂಘಟನೆಗಳು ಸೋಮವಾರ ಶಿರಸಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದವು.
ಭಾರತ ಬಂದ್ ಕರೆ ಹಿನ್ನೆಲೆಯಲ್ಲಿ ನಗರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪೋಲೀಸರ ಬಿಗಿ ಬಂದೋಬಸ್ತ್ ನಡುವೆ ರಸ್ತೆ ತಡೆ ನಡೆಸಿ ವಾಹನ ಸಂಚಾರ ಸ್ಥಗಿತಗೊಳಿಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಪ್ರಮುಖರಾದ ರಾಘವೇಂದ್ರ ಕಿರವತ್ತಿ,ಸತೀಶ ನಾಯ್ಕ, ಜಾಕಿರ್ ದಾಸನಕೊಪ್ಪ,ಪ್ರಮೋದ ಜಕಲಣ್ಣನವರ,ನವೀನ ಜಡೇದರ, ನಾಗರಾಜ ಡಾಂಗೆ,ರವೀಂದ್ರ ನಾಯ್ಕ,, ನಾಗಪ್ಪ ನಾಯ್ಕ ಇತರರಿದ್ದರು.