ಶಿರಸಿ: ನೆಹರು ಯುವ ಕೇಂದ್ರ, ಉತ್ತರ ಕನ್ನಡ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉತ್ತರ ಕನ್ನಡ ಹಾಗೂ ಅದ್ವೈತ ಸ್ಕೇಟರ್ಸ ಮತ್ತು ಸ್ಪೋಟ್ಸ್ ಕ್ಲಬ್ ರಿ. ಶಿರಸಿ ಇವರು ಆಯೋಜಿಸುತ್ತಿರುವ ಸ್ಪೀಡ್ ಸ್ಕೇಟಿಂಗ್ ಚಾಂಪಿಯನಶಿಪ್ 2021 ನ್ನು ಸೆ.26ರ ಬೆಳಿಗ್ಗೆ 10 ಗಂಟೆಗೆ ಅದ್ವೈತ ಸ್ಕೇಟಿಂಗ್ ರಿಂಕ್, ಶಿರಸಿಯಲ್ಲಿ ಆಯೋಜಿಸಿದೆ.
ಜಿಲ್ಲಾ ಯುವ ಅಧಿಕಾರಿ, ಕಾರವಾರದ ಯಶವಂತ ಯಾದವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಲೆಕ್ಕ ಪರಿಶೋಧಕ ಉದಯ ಸ್ವಾದಿ ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ರಾಜ್ಯ ತರಬೇತುದಾರ ದಿಲೀಪ್ ಹಣಬರ್, ನೆಹರು ಯುವ ಕೇಂದ್ರ ಕಾರವಾರದ ಮೀರಾ ನಾಯ್ಕ, ಡಿಎಸ್‍ಎಸ್ ಜಿಲ್ಲಾಧ್ಯಕ್ಷ ದೀಪಕ್ ಕುಡಾಳಕರ, ಯೋಜನಾ ಕ್ರೀಡಾ ಅಧಿಕಾರಿ ಕಿರಣ ನಾಯ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪಯಣ ಪ್ರವಾಸೋದ್ಯಮ ಸಂಸ್ಥೆಯ ವಿಶ್ವನಾಥ ಕುಡಾಳಕರ ಇರುವರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಗೌರಿ ಲೋಕೇಶ, ಅಧ್ಯಕ್ಷ ಕಿರಣಕುಮಾರ್, ಮತ್ತು ತರಬೇತುದಾರರಾದ ಶ್ಯಾಮಸುಂದರ್, ತರುಣ ಗೌಳಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಕ್ರೀಡಾಪಟುಗಳು ಉಪಸ್ಥಿತರಿರುವರು.