ಕಾರವಾರ: ಭಾರತೀಯ ಜನತಾ ಪಕ್ಷ ಕಾರವಾರ ಗ್ರಾಮೀಣ ಮಂಡಲದ ವತಿಯಿಂದ ಪಂಡಿತ್ ದೀನ್‌ದಯಾಳ ಉಪಾದ್ಯಾಯ ಅವರ ಜನ್ಮದಿನದ ಅಂಗವಾಗಿ ಗ್ರಾಮೀಣ ಮಹಿಳಾ ಮೋರ್ಚಾ ವತಿಯಿಂದ ಸದಾಶಿವಗಡದ ಪುರುಷೋತ್ತಮ ಸಭಾಭವನದಲ್ಲಿ ರಂಗೋಲಿ ಬಿಡಿಸುವ ಕಾರ್ಯಕ್ರಮ ನಡೆಯಿತು.ಕಾರವಾರ ತಾಲೂಕಿನ ಎಲ್ಲ ಬೂತ್‌ನಿಂದ ಮಹಿಳೆಯರು ಆಗಮಿಸಿ ವಿವಿಧ ಗಣ್ಯ ವ್ಯಕ್ತಿಗಳ ರಂಗೋಲಿಯ ಜೊತೆಗೆ ಮಹಿಳಾ ಸುರಕ್ಷತೆ ಜಾಗೃತಿಯ ರಂಗೋಲಿ ಬಿಡಿಸಿರುವುದು ಕಂಡುಬoದಿತು.
71 ರಂಗೋಲಿಯನ್ನು ಬಿಡಿಸಿ ಪಂಡಿತ ದೀನ್‌ದಯಾಳ ಉಪಾದ್ಯಾಯ ಅವರ ಜನ್ಮದಿನವನ್ನು ಯಶಸ್ವಿಯಾಗಿ ಆಚರಿಸಿದರು.ಗ್ರಾಮೀಣ ಮಂಡಲದ ಅಧ್ಯಕ್ಷರಾದ ಸುಭಾಷ ಗುನಗಿ ಅವರ ಅಧ್ಯಕ್ಷತೆಯಲ್ಲಿ ಪಂಡಿತ ದೀನ್‌ದಯಾಳ ಉಪಾದ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ನಡೆಸಲಾಯಿತು. ರಂಗೋಲಿ ಬಿಡಿಸಿದ ಎಲ್ಲ ಮಹಿಳೆಯರಿಗೂ ಪುಸ್ತಕ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ನಯನಾ ನೀಲಾವರ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ರೇಖಾ ಹೆಗಡೆ, ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರಶಾಂತ ನಾಯಕ, ಗ್ರಾಮೀಣ ಪ್ರಭಾರಿ ಗಜಾನನ ಗುನಗಾ ಅವರು ಮಾತನಾಡಿದರು
ದೀನದಯಾಳ್ ಜನ್ಮ ದಿನದ ಅಂಗವಾಗಿ ನಡೆದ ರಂಗೋಲಿ ಬಿಡಿಸುವ ಕಾರ್ಯಕ್ರಮ
