ಅಂಕೋಲಾ: ಶಿವಮೊಗ್ಗದಲ್ಲಿನ ಸೋಗಾನೆಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಹೆಸರು ಇಡಬೇಕೆಂದು ಅಂಕೋಲಾ ತಾಲೂಕ ಆರ್ಯ ಈಡಿಗ (ನಾಮಧಾರಿ) ಸಂಘವು ಮುಖ್ಯಂತ್ರಿಗಳಿಗೆ ಆಗ್ರಹಿಸಲು ತೀರ್ಮಾನಿಸಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಲೂಕ ಆರ್ಯ ಈಡಿಗ (ನಾಮಧಾರಿ) ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ನಾಮಧಾರಿ ಸಮುಧಾಯ ಭವನದಲ್ಲಿ ಇಂದು ಜರುಗಿದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಿರ್ಮಾನಿಸಲಾಯಿತು ಎಂದು ತಿಳಿಸಲಾಗಿದೆ.
ರಾಜ್ಯ ರಾಜಕಾರಣದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ, ಶೋಷಿತ ವರ್ಗದ ಧ್ವನಿಯಾಗಿ, ಹೋರಾಟ ಮತ್ತು ಸಾಮಾಜಿಕ ಚಿಂತನೆಯಿಂದ ಪ್ರಖ್ಯಾತವಾಗಿದ್ದು ಅವರ ಜಿಲ್ಲೆಯಲ್ಲಿಯೇ ಸ್ಥಾಪಿತವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪನವರ ಹೆಸರಿಡುವುದು ಸೂಕ್ತ ಎಂಬುದು ಸಭೆಯಲ್ಲಿ ಚರ್ಚಿಸಿ ತಿರ್ಮಾನಿಸಲಾಯಿತು.
ಕಾರ್ಯಕಾರಿ ಸಮಿತಿಯಲ್ಲಿ ಸಂಘದ ಕಾರ್ಯದರ್ಶಿ ನಾಗೇಶ ಶಂಕರ ನಾಯ್ಕ, ಜಿ ಎನ್ ನಾಯ್ಕ ಬಂಡಿಕಟ್ಟಾ, ವಿ ಸಿ ನಾಯ್ಕ, ರಾಜೇಶ ನಾಯ್ಕ ತೆಂಗಿನಕೇರಿ, ಉಮೇಶ ನಾಯ್ಕ ಬೆಳಗುಂದ, ವೆಂಕಟರಣ ನಾಯ್ಕ ಮಂಜಗುಣಿ, ಉಮೇಶ ನಾಯ್ಕ ಗುಡಗಾರಗಲ್ಲಿ, ನಾಗೇಶ ನಾಯ್ಕ ಹನ್ಮಠ, ಮಾರುತಿ ಡಿ ನಾಯ್ಕ ಗುಡಗಾರಗಲ್ಲಿ ಮುಂತಾದವರು ಉಪಸ್ಥಿತರಿದ್ದರು.