ದಾಂಡೇಲಿ : ಇಲ್ಲಿನ ಹಳೆಯ ಬಸ್ ನಿಲ್ದಾಣವನ್ನು ದುರಸ್ತಿಗೊಳಿಸಲು ವಾರ್ಡ್ 26ರ ನಾಗರಿಕರು ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಇಂದು ಮನವಿ ಸಲ್ಲಿಸಿ, ಆಗ್ರಹಿಸಿದ್ದಾರೆ.ಬಸ್ ನಿಲ್ದಾಣವು ದಿನಕಳೆಂದoತೆ ಹಾಳಾಗುತ್ತಿದ್ದು, ಈಗ ಪ್ರಯಾಣಿಕರಿಗೆ ಉಪಯೋಗಕ್ಕೆ ಬಾರದಂತಹ ಸ್ಥಿತಿಗೆ ತಲುಪಿದೆ. ಪ್ರಯಾಣಿಕರು ಕುಳಿತುಕೊಳ್ಳುವ ಕಟ್ಟೆಗಳೆಲ್ಲವೂ ಒಡೆದು ಹೋಗಿವೆ. ಅದರಂತೆ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಗೇಟ್ ಅಳವಡಿಸದ ಕಾರಣ ನಿಲ್ದಾಣದ ಒಳ ಭಾಗದಲ್ಲಿ ಹಂದಿ, ನಾಯಿ, ಆಕಳು, ಬೆಕ್ಕುಗಳು ಪ್ರವೇಶಿಸಿ, ಹಾಳುಗೆಡವುತ್ತಿವೆ.
ಈ ಸಮಸ್ಯೆಯನ್ನು ಬಗೆಹರಿಸಲು ಈಗಾಗಲೇ ಎರಡು ಬಾರಿ ಮನವಿ ಸಲ್ಲಿಸಿದ್ದೇವೆ. ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ನಿಲ್ದಾಣಕ್ಕೆ ಗೇಟ್ ಅಳವಡಿಸಿ, ಪ್ರತಿನಿತ್ಯದ ಸ್ವಚ್ಚತೆಗೆ ಆದ್ಯತೆ ನೀಡಬೇಕು ಮತ್ತು ಒಡೆದ ಕಟ್ಟೆಗಳನ್ನು ಮರು ನಿರ್ಮಾಣ ಮಾಡಿಕೊಡಬೇಕೆಂದು ಸಾರಿಗೆ ವ್ಯವಸ್ಥಾಪಕರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ವಾರ್ಡ್ 26ರ ನಾಗರಿಕರಾದ ಸಮೀರ ಶೇಖ, ಬಸವರಾಜ ಬಿ. ಡಿ, ಜಿ. ದಾನಂ ಪ್ರಕಾಶ, ದುಂಡಪ್ಪ ಪಾಟೀಲ, ಝಡ್. ದೇವದಾಸ, ಬಸವರಾಜ ವೈ. ಕೆ ಉಪಸ್ಥಿತರಿದ್ದರು.