ಯಲ್ಲಾಪುರ: ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರಿ ಸಂಘ ಮುಂಡಗೋಡದಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷರೂಗಳನ್ನು ಪಂಜಾಬ ಮತ್ತು ಮಹಾರಾಷ್ಟ್ರ ಬ್ಯಾಂಕಿನಲ್ಲಿ ಹಣ ತೊಡಗಿಸಿ ನಿಯಮವನ್ನು ಗಾಳಿಗೆ ತೂರಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅನ್ನದಾತ ರೈತ ಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ ನೇತೃತ್ವದಲ್ಲಿ ಯಲ್ಲಾಪುರದಲ್ಲಿ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಿದರು.
ಸಲ್ಲಿಸಿದ ಮನವಿಯಲ್ಲಿ ಹಣ ಇಡುವಾಗ ಎ.ಆರ್.ಅನುಮತಿ ಪಡೆದಿಲ್ಲ. ಸರ್ವಸಾಧಾರಣ ಸಭೆಯ ಅನುಮತಿ ಪಡೆದಿಲ್ಲ. ಒಂದು ಕೋಟಿ 20 ಲಕ್ಷ ರೂ ಹಣ ಇಟ್ಟಿದ್ದು, ಆ ಬ್ಯಾಂಕು ದಿವಾಳಿಯಾಗಿರುತ್ತದೆ. ಕಾರಣ ಸದ್ರಿ ಹಣವನ್ನು ಬಡ್ಡಿ ಸಮೇತ ಮರಳಿ ಸಂಘಕ್ಕೆ ಜಮಾ ಮಾಡಬೇಕು. ಇಲ್ಲವಾದಲ್ಲಿ ಅ.4 ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ.
ರಾಜ್ಯ ಉಪಾಧ್ಯಕ್ಷ ಭೀಮಶಿ ವಸಲ್ಮೀಕಿ, ಖಜಾಂಚಿ ಹನುಮಂತಪ್ಪಾ ಅರೆಗೊಪ್ಪ, ಪ್ರಮುಖರಾದ ಗೋವಿಂದಪ್ಪ ಬೇಂಡ್ಲಗಟ್ಟಿ, ಎಸ್.ಎಸ್.ಪಾಟೀಲ, ಎಂ.ಪಿ.ಹಾನಗಲ್, ಜೈತುನಬಿ, ಮಾರ್ಟಿನ ಬಳ್ಳಾರಿ, ರಬ್ಬಾನಿ ಪಟೇಲ್ ಮುಂತಾದವರು ಇದ್ದರು.