ಯಲ್ಲಾಪುರ: ರೈತರಿಗೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳಿಂದ ಸಿಗುವ ಸೌಲಭ್ಯಗಳು ಸರಿಯಾಗಿ, ಸರಿಯಾದ ಸಮಯಕ್ಕೆ ಸಿಗುವಂತಾಗಲಿ. ಹಾಗೆಯೇ ರೈತರು ಕೂಡ ತಮಗೆ ಸಿಕ್ಕ ಸೌಲಭ್ಯವನ್ನು ಸರಿಯಾಗಿ ಉಪಯೋಗಿಸಿಕೊಂಡು ತಮ್ಮ ಬೆಳೆಯನ್ನು ಉತ್ತಮವಾಗಿ ಬೆಳೆದು ಪ್ರಗತಿ ಹೊಂದಲೆಂದು ಆಶಿಸುತ್ತೇನೆ ಎಂದು ಗ್ರಾ.ಪಂ ಉಮ್ಮಚಗಿ ಅಧ್ಯಕ್ಷೆ ರೂಪಾ ಸೋಮಯ್ಯ ಹೇಳಿದರು.
ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತೋಟಗಾರಿಕಾ ಇಲಾಖೆ ಯಲ್ಲಾಪುರ, 2021-22 ನೇ ಸಾಲಿನ ಆತ್ಮಯೋಜನೆ ಅಡಿಯಲ್ಲಿ ಕನೇನಳ್ಳಿ ಗ್ರಾಮದ ಭಾಸ್ಕರ ಸುಬ್ರಾಯ ಹೆಗಡೆ ಅವರ ಮನೆಯಲ್ಲಿ ನಡೆದ ಸಮಗ್ರ ತೋಟಗಾರಿಕೆ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಹೇಳಿದರು.
ಇಲಾಖೆಯಲ್ಲಿ ಸಾವಿರಾರು ಯೋಜಗಳಿರುತ್ತವೆ. ಅದನ್ನು ತೆಗೆದುಕೊಳ್ಳುವ ಚಾಣಾಕ್ಷತೆ ರೈತರಲ್ಲಿ ಇರಬೇಕು. ಬೇರೆ ತಾಲೂಕುಗಳಿಗೆ ಹೋಲಿಸಿದರೆ ಯಲ್ಲಾಪುರ ತಾಲೂಕಿನಲ್ಲಿ ಯೋಜನೆಗಳನ್ನು ಪಡೆದುಕೊಳ್ಳುವ ರೈತರ ಸಂಖ್ಯೆ ತೀರಾ ಕಮ್ಮಿ. ಎಲ್ಲ ರೈತರೂ ಯೋಜನೆಗಳನ್ನು ಪಡೆದುಕೊಳ್ಳುವಂತಾಗಬೇಕು. ರೈತರಿಗೆ ಮಾಹಿತಿ ನೀಡುತ್ತ ತೋಟಗಾರಿಕಾ ಇಲಾಖೆಯ ಸತೀಶ್ ಹೆಗಡೆ ಮಾತನಾಡುತ್ತಾ ಹೇಳಿದರು.
ಸುಬ್ರಾಯ ಭಾಸ್ಕರ ಹೆಗಡೆ, ಜಿ.ಜಿ.ಹೆಗಡೆ ಕನೇನಳ್ಳಿ, ಉಮ್ಮಚ್ಗಿ ಗ್ರಾ.ಪಂ.ಸದಸ್ಯರುಗಳಾದ ಕುಪ್ಪಯ್ಯ ಪೂಜಾರಿ, ಗ.ರಾ.ಭಟ್ಟ, ತೋಟಗಾರಿಕಾ ಅಧಿಕಾರಿ ಹೀನಾ ಮೇಡಂ ಮೊದಲಾದವರು ಉಪಸ್ಥಿತರಿದ್ದರು. ಸ್ವಾಗತ ಮತ್ತು ನಿರ್ವಹಣೆ ಎಂ.ಜಿ. ಭಟ್ಟ ತಾಲೂಕಾ ತಾಂತ್ರಿಕ ಅಧಿಕಾರಿಗಳು ನಿರ್ವಹಿಸಿ, ವಂದಿಸಿದರು.