• Slide
    Slide
    Slide
    previous arrow
    next arrow
  • ಹಿಂದೂ ಭಾವನೆಗೆ ಧಕ್ಕೆಯಾಗದ ಹೊಸ ಮಾದರಿ ಕಾನೂನು ರಚನೆ ಮಾಡಿ; ‘ಸಿಎಂ’ಗೆ ಮನವಿ ಸಲ್ಲಿಕೆ

    300x250 AD

    ಶಿರಸಿ: ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯಾಗದ ರೀತಿಯಲ್ಲಿ ಹೊಸ ಮಾದರಿಯ ಸರ್ವ ಸಮ್ಮತ ಕಾನೂನನ್ನು ಜಾರಿಗೆ ತರುವ ಕುರಿತು, ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಇನ್ನಿತರ ಸಚಿವರಿಗೆ ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳ ಶಿರಸಿ ಇವರು ಮನವಿ ಸಲ್ಲಿಸಿದರು.

    ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿ ಅಧಿನಿಯಮ, 1997 ಮತ್ತು ತಿದ್ದುಪಡಿ ಅಧಿನಿಯಮ 2011ಇದರ ಬದಲಿಗೆ ರಾಜ್ಯದ ಎಲ್ಲಾ ಹಿಂದೂಗಳಿಗೆ ಸರ್ವಸಮ್ಮತವಾದ, ಹಿಂದೂ ದೇವಾಲಯಗಳ ಪರಂಪರೆ, ಶತಮಾನಗಳಿಂದ ನಡೆದು ಬಂದ ಸಂಪ್ರದಾಯ,ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ, ಆಸ್ತಿಕ ಹಿಂದುಗಳ ಧಾರ್ಮಿಕ ಭಾವನೆಗೆ ಘಾಸಿಯಾಗದ ರೀತಿಯಲ್ಲಿ ಮಾದರಿ ಹೊಸ ಸರ್ವ ಸಮ್ಮತ ಕಾನೂನನ್ನು ಜಾರಿಗೆ ತರುವ ಕುರಿತು, ಶೀಘ್ರದಲ್ಲಿ ಪರಿಣಿತರ ಸಮಿತಿಯನ್ನು ರಚಿಸಬೇಕು. ಹಾಗೂ ಇತ್ತೀಚಿಗಿನ ದೇವಾಲಯಗಳ ಸಮಸ್ಯೆ ಬಗ್ಗೆ, ಉತ್ತರ ಕನ್ನಡ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾಮಂಡಳದ ಗೌರವಾಧ್ಯಕ್ಷ, ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಸ್ವರ್ಣವಲ್ಲಿ ಇವರ ಆದೇಶದಂತೆ, ಮಹಾಮಂಡಳದ ಒಂದು ನಿಯೋಗ ವಿಧಾನಸೌದದಲ್ಲಿ ಸಿಎಂ ಬೊಮ್ಮಾಯಿಗೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಉ ಕ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಇವರೆಲ್ಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.


    ಕಾನೂನಿನಲ್ಲಿ ಅಳವಡಿಸಬೇಕೆಂದು ಆಗ್ರಹಿಸಿದ ಅಂಶಗಳು:

    300x250 AD
    1. ಧಾರ್ಮಿಕ ಪರಿಷತ್ತು: ದೇವಸ್ಥಾನಗಳ ನಿರ್ವಹಣೆಗೆ ಕೇವಲ ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳ ಬದಲು ರಾಜ್ಯ ಮಟ್ಟದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತು ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ತುಗಳು ರಚನೆಯಾಗಬೇಕು. ಇಂಥ ಧಾರ್ಮಿಕ ಪರಿಷತ್ತುಗಳು ಸ್ವಾಯತ್ತ ಸಂಸ್ಥೆಗಳಂತಿರಬೇಕು. ರಾಜ್ಯ ಧಾರ್ಮಿಕ ಪರಿಷತ್ತಿಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ಉಪಾಧ್ಯಕ್ಷರಾಗಿರಬೇಕು ಮತ್ತು ಅಧ್ಯಕ್ಷರಾಗಿರಬೇಕು, ಮುಜರಾಯಿ ಕಮೀಶನರ್ ಸಚಿವರು ಸದಸ್ಯ ಕಾರ್ಯದರ್ಶಿಯಾಗಿರಬೇಕು. ಜಿಲ್ಲಾ ಧಾರ್ಮಿಕ ಪರಿಷತ್ತಿಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರು ಅಧ್ಯಕ್ಷರಾಗಿರಬೇಕು ಮತ್ತು ಜಿಲ್ಲಾಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿರಬೇಕು. ಇಂಥ ಧಾರ್ಮಿಕ ಪರಿಷತ್ತುಗಳಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಿಷ್ಕಳಂಕ ಚರಿತ್ರೆಯ ವ್ಯಕ್ತಿಗಳು ಇವುಗಳ ಸದಸ್ಯರಾಗಿರಬೇಕು ಮತ್ತು ಯಾವುದೇ ರಾಜಕೀಯ ಪಕ್ಷಗಳ ನಂಟು ಹೊ0ದಿರದ, ರಾಜಕೀಯ ಹಿನ್ನಲೆ ಹೊಂದಿರದ ವ್ಯಕ್ತಿಗಳು ಮಾತ್ರ ಸದಸ್ಯರಾಗುವಂತೆ ನಿಯಮಾವಳಿ ಮಾಡಬೇಕು.
    2. ಆಡಳಿತ ಮಂಡಳಿ: ದೇವಸ್ಥಾನಗಳ ಆಡಳಿತ ಮಂಡಳಿ (ಮೊಸರ ಮಂಡಳಿ) ರಚನೆ ಮಾಡುವಾಗ ಆಯಾ ದೇವಸ್ಥಾನದ ವ್ಯಾಪ್ತಿಯಲ್ಲಿರುವವರನ್ನು ಮಾತ್ರ ಪರಿಗಣಿಸುವಂತಿರಬೇಕು. ದೇವಸ್ಥಾನದ ಪ್ರಧಾನ ಅರ್ಚಕರೊಬ್ಬರು ಕಡ್ಡಾಯವಾಗಿ ಆಡಳಿತ ಮಂಡಳಿಯಲ್ಲಿರಬೇಕು. ದೇವಸ್ಥಾನದ ಸಂಪೂರ್ಣ ಆಡಳಿತದ ಅಧಿಕಾರ ಆಡಳಿತ ಮಂಡಳಿಗೆ ಇರಬೇಕು ಮತ್ತು ದೇವಸ್ಥಾನಕ್ಕೆ ಯಾವುದೇ ಕಾರ್ಯ ನಿರ್ವಹಣಾ ಅಧಿಕಾರಿ ನೇಮಕಾತಿ ಮಾಡಬಾರದು.
    3. ಆಡಳಿತಾಧಿಕಾರಿ: ದೇವಸ್ಥಾನಗಳಿಗೆ ಆಡಳಿತ ಮಂಡಳಿ ಇಲ್ಲದೇ ಹೋದ ಸಂದರ್ಭದಲ್ಲಿ, ಬಿಕ್ಕಟ್ಟು ಎದುರಾದಾಗ ಮಾತ್ರ ಸೀಮಿತ ಅವಧಿಗೆ ಮಾತ್ರ ತಾತ್ಕಾಲಿಕವಾಗಿ ಆಡಳಿತಾಧಿಕಾರಿ ನೇಮಿಸುವ ಅವಕಾಶ ಇರಬೇಕು.
    4. ಅರ್ಚಕರು: ದೇವಸ್ಥಾನಕ್ಕೆ ಅರ್ಚಕರ ನೇಮಕ ಮಾಡುವಾಗ ಆಯಾ ದೇವಸ್ಥಾನದ ಸಂಪ್ರದಾಯದ ಪ್ರಕಾರವೇ ಅರ್ಚಕರ ನೇಮಕ ಆಡಳಿತ ಮಂಡಳಿ ಮಾಡುವಂತಿರಬೇಕು. ಅರ್ಚಕರಿಗೆ ಯಾವುದೇ ನಿವೃತ್ತಿ ವಯಸ್ಸು ನಿಗದಿ ಪಡಿಸಬಾರದು.
    5. ವಂಶ ಪಾರಂಪರ್ಯ: ವಂಶ ಪಾರಂಪರ್ಯ ಮೊಕ್ಷೇಸರಿಕೆ ಮತ್ತು ವಂಶ ಪಾರಂಪರ್ಯ ಆರ್ಚಕತನವನ್ನು ಮುಂದುವರಿಸಬೇಕು. ಹೊಸ ಕಾನೂನಿನಲ್ಲಿ ಗುರುತಿಸುವಂತಾಗಬೇಕು ಮತ್ತು ಅದನ್ನು ಮುಂಡುವರಿಸಬೇಕು.
    6. ಸಾಮಾನ್ಯ ಸಂಗ್ರಹಣಾ ನಿಧಿ (ಕಾಮನ್ ಫೂಲ್ ಫಂಡ್) : ಸಾಮಾನ್ಯ ಸಂಗ್ರಹಣಾ ನಿಧಿಗೆ ದೇವಸ್ಥಾನಗಳು ಸರಕಾರ ನಿಗದಿ ಪಡಿಸಿದ ವಂತಿಗೆ ನೀಡಲು ಸಿದ್ಧವಿದೆ. ದೇವಸ್ಥಾನಗಳ ವಾರ್ಷಿಕ ಆದಾಯದಿಂದ ಸಂಗ್ರಹವಾಗುವ ಸಾಮಾನ್ಯ ಸಂಗ್ರಹಣಾ ನಿಧಿಯ ಹಣವನ್ನು ಯಾವುದೇ ಪರಿಸ್ಥಿತಿಯಲ್ಲಿ ಇತರ ಧರ್ಮಗಳ ಧಾರ್ಮಿಕ ಸಂಸ್ಥೆಗಳಿಗೆ ನೀಡದೇ ಇವು ಅಗತ್ಯವಿರುವ ಹಿಂದೂ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕು.
    7. ಈ ಪ್ರಕಾರ ಹೊಸ ಕಾನೂನು ಜಾರಿಗೆ ಬರುವವರೆಗೆ ಅಥವಾ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣ ಅಂತಿಮವಾಗಿ ತೀರ್ಮಾನ ಆಗುವವರೆಗೆ ದೇವಸ್ಥಾನಗಳಿಗೆ ಆಡಳಿತ ಮಂಡಳಿ ನೇಮಕ, ಆಡಳಿತಾಧಿಕಾರಿ ನೇಮಕ, ಕಾರ್ಯ ನಿರ್ವಹಣಾ ಅಧಿಕಾರಿ ನೇಮಕ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

    ಎಲ್ಲ ಸಚಿವರಿಂದ ಆಶಾದಾಯಕ ಸ್ಪಂದನೆ ದೊರೆತಿದ್ದು, ನಿಯೋಗದಲ್ಲಿ ಮಹಾಮಂಡಳದ ಕಾರ್ಯಾಧ್ಯಕ್ಷ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್.ಜಿ.ನಾಯ್ಕ, ಕಾರ್ಯದರ್ಶಿ ಗೋಪಾಲಕೃಷ್ಣ ವೈದ್ಯ ಮತ್ತೀಘಟ್ಟ, ಸದಸ್ಯ ಮಾರುತಿ ಓಂಕಾರ್ ಮುಂಡಗೋಡ, ವಿನಾಯಕ ಮಹಾಲೆ ಸಿದ್ದಾಪುರ, ವಿ ಆರ್ ಹೆಗಡೆ, ಮತ್ತಿಘಟ್ಟ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top