ಶಿರಸಿ: ಇಲ್ಲಿನ ಕದಂಬ ಮಾರ್ಕೆಟಿಂಗ್ ನಲ್ಲಿ ಇದೀಗ ಇದೇ ಪ್ರಥಮವಾಗಿ ಮಳೆಗಾಲದಲ್ಲಿ ಬಿದ್ದ ಗೋಟಡಿಕೆಗೆ (ಕಾರುಗೋಟು) ಟೆಂಡರ್ ಮೂಲಕ ಮಾರಾಟ ವ್ಯವಸ್ಥೆ ಕಲ್ಪಿಸಿದ್ದು ಶುಕ್ರವಾರದಿಂದ ಪ್ರಕ್ರಿಯೆ ಆರಂಭಗೊಂಡಿದೆ. ರೈತರಿಂದ ಉತ್ತಮ ಸ್ಪಂದನೆ ಲಭಿಸಿದ್ದು ಮೊದಲ ದಿನವೇ ಗೋಟು, ಕೊಳೆ, ಸಿಪ್ಪೆಚಾಲಿ ಸೇರಿದಂತೆ ಸುಮಾರು 14ಕ್ವಿಂಟಲ್ ಅಡಿಕೆ ಮಾರಾಟವಾಗಿದೆ ಎಂದು ತಿಳಿಸಿದೆ.
ಮಳೆಗಾಲದ ಸಮಯದಲ್ಲಿ ಅಡಿಕೆಯನ್ನು ಒಣಗಿಸಲು ಮತ್ತು ಸಂಸ್ಕರಿಸಲು ಅನಾನುಕೂಲತೆ ಉಳ್ಳವರಿಗೆ ಅನುಕೂಲವಾಗಲೆಂದು ಈ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಅಡಿಕೆ ಟೆಂಡರ್ ನಡೆಯಲಿದ್ದು ಹಸಿ ಅಡಿಕೆ, ಕೊಳೆ, ಬತ್ತಡಿಕೆ, ಗೋಟು ಹಾಗೂ ಎಲ್ಲಾ ತರಹದ ಅಡಿಕೆಯನ್ನು ಟೆಂಡರ್ ಗೆ ತರಬಹುದಾಗಿದೆ ಎಂದು ತಿಳಿಸಲಾಗಿದೆ.