• Slide
    Slide
    Slide
    previous arrow
    next arrow
  • ಕಸಾಯಿ ಖಾನೆ ಖುಲ್ಲಾಪಡಿಸಿ; ಹಿಂಜಾವೇಯಿಂದ ಎಸಿಗೆ ಮನವಿ

    300x250 AD

    ಭಟ್ಕಳ: ತಾಲೂಕಿನ ಮುಖ್ಯ ಪೇಟೆಯಲ್ಲಿನ ಅಕ್ರಮ ಕಸಾಯಿಖಾನೆಯನ್ನು ಖುಲ್ಲಾಪಡಿಸಬೇಕೆಂದು ಆಗ್ರಹಿಸಿ ಹಿಂದು ಜಾಗರಣಾ ವೇದಿಕೆ ಭಟ್ಕಳ ಘಟಕದಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.


    ರಾಜ್ಯ ಸರ್ಕಾರ ಗೋ ಹತ್ಯೆ ತಡೆಗೆ ಕಾನೂನಾತ್ಮಕ ಕಠಿಣ ನಿರ್ಬಂಧಗಳನ್ನು ವಿಧಿಸಿ ಒಂದು ವರ್ಷ ಕಳೆದರೂ ಕೂಡ ಭಟ್ಕಳದಲ್ಲಿ ಕಾನೂನೂ ಬಾಹಿರವಾಗಿ ನಿಯಮಗಳನ್ನು ಉಲ್ಲಂಘಿಸಿ ಗೋಹತ್ಯೆ ನಡೆಯುತ್ತಿದೆ. ಪಟ್ಟಣದ ಆದಿ ದೇವತೆ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಕೆಲವೇ ಮೀಟರ್ ಅಂತರದಲ್ಲಿ ಅಕ್ರಮ ಕಸಾಯಿಖಾನೆ ಕಾನೂನು ಬಾಹಿರವಾಗಿ ನಡೆಯುತ್ತಿದೆ.

    300x250 AD


    ತಾಲೂಕು ಆಡಳಿತ ತಕ್ಷಣದಿಂದ ಕ್ರಮ ಕೈಗೊಂಡು ಮೇಲಿನ ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸಬೇಕು ಎಂದು ಹಿಂದು ಜಾಗರಣಾ ವೇದಿಕೆ ಭಟ್ಕಳ ಘಟಕ ಆಗ್ರಹಿಸುತ್ತದೆ. ಒಂದು ವೇಳೆ ಈ ಬಗ್ಗೆ ತಾವು ಯಾವುದೇ ಕ್ರಮ ಕೈಗೊಳ್ಳದೇ ಇದ್ದಲ್ಲಿ ಹಿಂದೂ ಜಾಗರಣಾ ವೇದಿಕೆ ಈ ಬಗ್ಗೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಮನವಿಯನ್ನು ನೀಡಿ ಎಚ್ಚರಿಸಿದರು.


    ಈ ಸಂದರ್ಭದಲ್ಲಿ ಹಿಂ.ಜಾ.ವೇ. ತಾಲೂಕು ಘಟಕದ ಅಧ್ಯಕ್ಷ ವಾಸು ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ದಿನೇಶ ಗವಾಳಿ, ಹಿರಿಯ ಕಾರ್ಯಕರ್ತ ರಾಮಕೃಷ್ಣ ನಾಯ್ಕ, ಹನುಮಂತ ನಾಯ್ಕ, ತುಳಸಿದಾಸ ನಾಯ್ಕ, ಹಿಂ.ಜಾ.ವೇ. ಶ್ರೀನಿವಾಸ ನಾಯ್ಕ, ದೀಪಕ ನಾಯ್ಕ, ಉದಯ ನಾಯ್ಕ, ವೆಂಕಟೇಶ ನಾಯಕ ಮುಂತಾದವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top