• Slide
    Slide
    Slide
    previous arrow
    next arrow
  • ಯುವ ಸಹಾಯವಾಣಿ ಯೋಜನೆಗೆ ಚಾಲನೆ

    300x250 AD


    ಕಾರವಾರ: ಯುವಜನರಿಗೆ ಮಾಹಿತಿಯನ್ನು ನೀಡಲು 155-265 ಎಂಬ ವಿಶಿಷ್ಟ ಸಂಖ್ಯೆಯನ್ನು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವಸಹಾಯವಾಣಿ ಯೋಜನೆಗೆ ಚಾಲನೆ ನೀಡಲಾಗುತ್ತಿದೆ.


    ಯುವಜನರಿಗೆ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಸಕಾಲದಲ್ಲಿ ಒದಗಿಸುವುದು, ಸರ್ಕಾರ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆಯಲು ಅಪಾಯಕಾರಿ ಮತ್ತು ಮಾನಸಿಕ ಒತ್ತಡದ ಸಂದರ್ಭಗಳಲ್ಲಿರುವ ಯುವಜನರಿಗೆ ಸ್ಥೈರ್ಯ ಒದಗಿಸಲು ಆಪ್ತ ಸಮಾಲೋಚನೆ ಸಹಾಯ ಹಾಗೂ ಸಂದರ್ಭೋಚಿತವಾದ ಅಗತ್ಯ ಕೌಶಲ್ಯ ಮತ್ತು ತರಬೇತಿಗಳ ಮಾಹಿತಿ ಪಡೆಯಲು ಮತ್ತು ಒದಗಿಸಲು ಈ ಯುವ ಸಹಾಯವಾಣಿ ಸಹಾಯಕವಾಗಿದೆ.

    300x250 AD


    ಸಹಾಯಕವಾಣಿ ಮೂಲಕ ಖಾಸಗಿ ಕ್ಷೇತ್ರಗಳಲ್ಲಿ ಅಭ್ಯವಿರುವ ಉದ್ಯೋಗಾವಕಾಶಗಳಿಗೆ ಅಗತ್ಯ ಕೌಶಲ್ಯಗಳ ಬಗ್ಗೆ ಮಾಹಿತಿಯನ್ನು ಯುವಜನರಿಗೆ ಒದಗಿಸಲು ಮತ್ತು ಸರ್ಕಾರದ ಕೌಶಲ್ಯಾಭಿವೃದ್ಧಿ ಕಾರ್ಯಾಕ್ರಮಗಳ ಸದುಪಯೋಗ ಪಡೆಯುವಂತೆ ಪೆÇ್ರೀತ್ಸಾಹಿಸಲು ಉದ್ದೇಶಿಸಲಾಗಿರುತ್ತದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top