ಶಿರಸಿ: ತಾಲೂಕಿನಲ್ಲಿ ಸೆ.25 ಶನಿವಾರ 840 ಡೋಸ್ ಲಸಿಕೆ ಲಭ್ಯವಿದ್ದು, ಅದನ್ನು ಪ್ರಥಮ ಮತ್ತು ದ್ವಿತೀಯ ಡೋಸ್ ಲಸಿಕೆ ಪಡೆಯುವವರು ಪಡೆದುಕೊಳ್ಳಬಹುದಾಗಿದೆ ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 840 ಡೋಸ್ ಲಸಿಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಬನವಾಸಿಯಲ್ಲಿ 100, ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50, ದಾಸನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 40, ದೇವನಳ್ಳಿಯಲ್ಲಿ 50, ಪ್ರಾಥಮಿಕ ಆರೋಗ್ಯ ಕೇಂದ್ರದ ಹುಲೇಕಲ್’ನಲ್ಲಿ 50, ಅರ್ಬನ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250, ಕಾನಗೋಡಿನಲ್ಲಿ 50, ಅಯ್ಯಪ್ಪ ನಗರ ದೇವಸ್ಥಾನದಲ್ಲಿ 250 ಡೋಸ್ ಲಸಿಕೆ ಲಭ್ಯವಿದೆ.