ಶಿರಸಿ: ಗೆಳೆಯರ ಬಳಗ ಭೈರುಂಬೆ ಆಶ್ರಯದಲ್ಲಿ ನಾದಾವಧಾನ ಸಂಯೋಜನೆಯ ‘ಯಕ್ಷ-ಗಾನ- ಯಾನ’ ಕಾರ್ಯಕ್ರಮ ಸೆ.24 ಶುಕ್ರವಾರ ಸಂಜೆ 6.30 ರಿಂದ ಹುಳಗೋಳ ಸೇವಾ ಸಹಕಾರಿ ಸಂಘದ ಸಭಾಭವನ ಭೈರುಂಬೆಯಲ್ಲಿ ನಡೆಯಲಿದೆ.
ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಳೆಯಲ್ಲಿ ಎನ್.ಜಿ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಪ್ರಸನ್ನ ಹೆಗ್ಗಾರ್ ಇರುವರು. ಅತಿಥಿ ಕಲಾವಿದರಾಗಿ ಎ.ಪಿ ಪಾಠಕ್ ಪುಣೆ, ಯುವ ಪ್ರತಿಭೆಗಳಾದ ಶ್ರೀರಕ್ಷಾ ಹೆಗಡೆ ಸಿದ್ದಾಪುರ, ಭಾವನಾ ಹೆಗಡೆ ಜೊತೆಯಾಗಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಈ ಕಾರ್ಯಕ್ರಮವನ್ನು ಲೈವ್’ನಲ್ಲಿ ವೀಕ್ಷಿಸಲು ಈ https://youtu.be/PAE5kYFG4sM ಲಿಂಕ್ ಬಳಸಬಹುದಾಗಿದೆ.