ಯಲ್ಲಾಪುರ: ಉರ್ದು ಶಾಲಾ ಸಮಿತಿಯ ಅಧ್ಯಕ್ಷನೊಬ್ಬ ಪಂಚಾಯತ ಪಿಡಿಓ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ನಂದಿಕಟ್ಟ ಗ್ರಾಮದಲ್ಲಿ ಇಂದು ಜರುಗಿದೆ. ನಂದಿಕಟ್ಟ ಉರ್ದು ಕಿರಿಯ ಪ್ರಾಥಮಿಕ ಶಾಲಾ ಸಮಿತಿಯ ಅಧ್ಯಕ್ಷ ಗೌಸುಸಾಬ ಎಳ್ಳೂರ ಎಂಬವನೆ ಹಲ್ಲೆ ನಡೆಸಿದ ವ್ಯಕ್ತಿಯಾಗಿದ್ದಾನೆ ಉರ್ದು ಶಾಲೆಯ ಆವರಣದಲ್ಲಿರುವ ನಾಲ್ಕು ಮರಗಳನ್ನು ಕಟಾವ್ ಮಾಡಲು ನೀರಾಕ್ಷೇಪಣ ಪತ್ರ ನೀಡುವಂತೆ ಗ್ರಾಮ ಪಂಚಾಯತಕ್ಕೆ ಅರ್ಜಿ ಸಲ್ಲಿಸಿದ್ದ ಆದರೆ ನೀರಾಕ್ಷೇಪಣ ಪತ್ರ ಪಂಚಾಯತದಿAದ ನೀಡಲು ಬರುವುದಿಲ್ಲ ಅರಣ್ಯ ಇಲಾಖೆಯಿಂದ ಪಡೆದುಕೊಳ್ಳುವಂತೆ ಹಿಂಬರಹವನ್ನು ಪಂಚಾಯತ ಪಿಡಿಓ ವೆಂಕಪ್ಪಲಮಾಣಿ ನೀಡಿದ್ದರು. ಇದೆ ವಿಷಯಕ್ಕೆ ಕೋಪಗೊಂಡ ಗೌಸುಸಾಬ ಅಭಿವೃದ್ಧಿ ಅಧಿಕಾರಿ ವೆಂಕಪ್ಪಲಮಾಣಿ ಅವರನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಕೈಯಿಂದ ಕುತ್ತಿಗೆ ಹಿಡಿದು ಹಲ್ಲೆ ನಡೆಸಿದ್ದನಲ್ಲದೇ, ಸಿಬ್ಬಂದಿಗಳಿಗೂ ನಿಂದಿಸಿದ್ದಾನೆ. ಇದೀಗ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಉರ್ದು ಶಾಲಾ ಸಮಿತಿಯ ಅಧ್ಯಕ್ಷನಿಂದ ಪಂಚಾಯತ ಪಿ.ಡಿ.ಒ ಮೇಲೆ ಹಲ್ಲೆ
