ಕುಮಟಾ: ಶ್ರೀನಿವಾಸ ಚೆರಿಟೇಬಲ್ ಟ್ರಸ್ಟ್ ಹೆರವಟ್ಟಾ ಕುಮಟಾದಲ್ಲಿ ದಿ. ವಿನಯಾ ಶ್ಯಾನಭಾಗರ ಪುಣ್ಯತಿಥಿಯ ನಿಮಿತ್ತ ಮತ್ತು ದಿ. ಬಿಕ್ಕು ವೈಕುಂಠ ಕಾಮತ ಹಾಗೂ ದಿ. ಅನ್ನಪೂರ್ಣ ಬಿಕ್ಕು ಕಾಮತರ ಸ್ಮರಣಾರ್ಥ ಅವರ ಮಗನಾದ ಮೋಹನ ಬಿಕ್ಕು ಕಾಮತ ಮುಂಬೈ ಇವರು ನೀಡಿದ ಶಿಷ್ಯವೇತನ ಮತ್ತು ಅಸಹಾಯಕರಿಗೆ ವೈದ್ಯಕೀಯ ನೆರವಿನ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಸಂಸ್ಥೆಯ ಅಧ್ಯಕ್ಷರಾದ ಮೀರಾ ಶ್ಯಾನಭಾಗ ಮತ್ತು ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಮತ್ತು ಆರ್.ಎಸ್.ಎಸ್. ಪ್ರಮುಖರಾದ ಹನುಮಂತ ಶ್ಯಾನಭಾಗರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಸುನಂದಾ ಸುರೇಶ ಶೇಟ್ (ಗುಡಿಗಾರ) ರವರಿಗೆ ಕಟ್ಟಿಗೆಯ ಕೆತ್ತನೆಯ ಕುಶಲ ಕಾರ್ಮಿಕರೆಂದು ಮತ್ತು ಪಿ.ಯು.ಸಿ.ಯಲ್ಲಿ 100 ಕ್ಕೆ 100 ಮತ್ತು ಅತಿ ಹೆಚ್ಚು ಅಂಕಗಳಿಸಿದ ಕುಮಾರಿ. ವಸುಧಾ ಪ್ರಭು, ತೇಜಸ್ವಿನಿ ಶ್ಯಾನಭಾಗ, ಕಾವ್ಯ ಹೆಗಡೆಕಟ್ಟೆ, ಶ್ರೇಯಾ ಶ್ಯಾನಭಾಗ ಹೆಗಡೆಕರ್ ಮತ್ತು ಧ್ರುವ ಪೈ ಇವರನ್ನು ಸಾಧಕರೆಂದು ಗೌರವಿಸಿ ಸನ್ಮಾನಿಸಲಾಯಿತು.
ಸ್ವಾಗತ ಮತ್ತು ಪ್ರಸ್ತಾವನೆಯನ್ನು ಅಧ್ಯಕ್ಷೆ ಮೀರಾ ಶ್ಯಾನಭಾಗ ಮಾಡಿದರು. ಅತಿಥಿಗಳ ಪರಿಚಯವನ್ನು ಟ್ರಸ್ಟಿಗಳಾದ ಅರುಣ ಕಾಮತ, ಸಾಧಕರ ಸಾಧನೆಯನ್ನು ದಿನಕರ ಕಾಮತ, ವಂದನಾರ್ಪಣೆಯನ್ನು ಮುರಳೀಧರ ಭಟ್ಟರು ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಅನಂತ ಶ್ಯಾನಭಾಗರು ನೆರವೇರಿಸಿದರು. ಅಂದು 12 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮತ್ತು 3 ಜನರಿಗೆ ವೈದ್ಯಕೀಯ ಸಹಾಯ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಯುತ ಕೃಷ್ಣ ಪೈ, ವಿಜಯಾನಂದ ಗೋಳಿ, ವಿಷ್ಣು ಶ್ಯಾನಭಾಗ, ಮೋಹನ ಧಾರೇಶ್ವರ, ವಿಷ್ಣು ಹೆಗಡೆಕರ್ ಮುಂತಾದವರು ಉಪಸ್ಥಿತರಿದ್ದರು.