Slide
Slide
Slide
previous arrow
next arrow

ಅನಧೀಕೃತ ಪದವಿ, ಡಾಕ್ಟರೇಟ್ ನೀಡುವ ಸಂಸ್ಥೆ ವಿರುದ್ಧ ಕಠಿಣ ಕ್ರಮ; ಸಚಿವ ಅಶ್ವತ್ಥ್ ನಾರಾಯಣ್

300x250 AD

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಸಂಸ್ಥೆಗಳು ನಕಲಿ, ಅನಧೀಕೃತ ಪದವಿ, ಡಾಕ್ಟರೇಟ್ ನೀಡುವುದು ಕಂಡುಬಂದಲ್ಲಿ ಎಫ್‍ಐಆರ್ ದಾಖಲಿಸುವಂತೆ 2021 ರ ಫೆಬ್ರವರಿ 26 ರಂದು ಆದೇಶ ಹೊರಡಿಸಲಾಗಿದೆ ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ಈ ಸಂಬಂಧ ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ 23 ಸರ್ಕಾರಿ ವಿವಿಗಳಿವೆ. ಅವುಗಳು ಈ ವರೆಗೆ 1856 ಜನರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಹಾಗೆಯೇ 21 ಖಾಸಗಿ ವಿವಿಗಳಿದ್ದು, ಅವುಗಳಲ್ಲಿ ಐದು ವಿವಿಗಳು 23 ಮಂದಿಗೆ ಗೌರವ ಡಾಕ್ಟರೇಟ್ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

300x250 AD

ಗೌರವ ಡಾಕ್ಟರೇಟ್ ಅನ್ನು ನೀಡುವುದಕ್ಕೂ ವಿವಿಗಳು ಹಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ನಿಯಮಾವಳಿಗಳ ಅಡಿಯಲ್ಲಿ ಸೂಕ್ತ ಪ್ರಕ್ರಿಯೆ ನಡೆಸಿದ ಬಳಿಕವೇ ತೀರ್ಮಾನ ಕೈಗೊಳ್ಳಲಾಗುತ್ತದೆ. ವಿವಿಗಳು ಶಿಫಾರಸ್ಸು ಮಾಡಿದ ಹೆಸರುಗಳನ್ನು ರಾಜ್ಯಪಾಲರು ನೇಮಕ ಮಾಡುವ ತಜ್ಞರ ಸಮಿತಿ ಪರಿಶೀಲನೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

Share This
300x250 AD
300x250 AD
300x250 AD
Back to top